ಕರ್ನಾಟಕ

karnataka

ETV Bharat / state

ಚಾಮರಾಜನಗರ ನಗರಸಭೆಯಿಂದ ಕಳಪೆ ರಾಷ್ಟ್ರಧ್ವಜ ಪೂರೈಕೆ ಆರೋಪ

ರಾಷ್ಟ್ರಧ್ವಜಗಳನ್ನು ಹಾರಿಸಲು ಮುಂದಾದ ನಗರದ ವರ್ತಕರಿಗೆ ನಗರಸಭೆ ಕಳಪೆ ರಾಷ್ಟ್ರಧ್ವಜ ಪೂರೈಸಿದೆ ಎಂದು ವರ್ತಕ ಚಿದಾನಂದ ಗಣೇಶ್ ಆರೋಪಿಸಿದ್ದಾರೆ.

shoddy national flag supply in chamarajanagara
ಚಾಮರಾಜನಗರ ನಗರಸಭೆಯಿಂದ ಕಳಪೆ ರಾಷ್ಟ್ರಧ್ವಜ ಪೂರೈಕೆ ಆರೋಪ

By

Published : Aug 10, 2022, 7:11 PM IST

ಚಾಮರಾಜನಗರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ರಾಷ್ಟ್ರಧ್ವಜಗಳನ್ನು ಹಾರಿಸಲು ಮುಂದಾದ ನಗರದ ವರ್ತಕರಿಗೆ ನಗರಸಭೆ ಕಳಪೆ ರಾಷ್ಟ್ರಧ್ವಜ ಪೂರೈಸಿದೆ ಎಂದು ವರ್ತಕ ಚಿದಾನಂದ ಗಣೇಶ್ ತಿಳಿಸಿದರು.

ಚಾಮರಾಜನಗರ ವರ್ತಕರ ಸಂಘದಿಂದ 5 ಸಾವಿರ ಹಣ ಕೊಟ್ಟು 200ಕ್ಕೂ ಹೆಚ್ಚು ಧ್ವಜವನ್ನು ಚಾಮರಾಜನಗರ ನಗರಸಭೆಯಿಂದ ತರಿಸಿಕೊಳ್ಳಲಾಗಿದೆ. ಆದರೆ ಹರಿದ, ಅಳತೆ ಏರುಪಾರಾಗಿರುವ, ಬಣ್ಣ ಮಾಸಿದ ತ್ರಿವರ್ಣ ಧ್ವಜಗಳನ್ನು ಪೂರೈಸಿ ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ.

ವರ್ತಕ ಚಿದಾನಂದ ಗಣೇಶ್

ಈ‌ ಸಂಬಂಧ ವರ್ತಕರ ಸಂಘದ ಚಿದಾನಂದ ಗಣೇಶ್ ಮಾತನಾಡಿ, ನಗರಸಭೆಯಿಂದ ಎಲ್ಲಾ ವರ್ತಕರಿಗೆ‌‌ ವಿತರಿಸಲು‌‌‌ 200ಕ್ಕೂ ಹೆಚ್ಚು ರಾಷ್ಟ್ರಧ್ವಜಗಳನ್ನು ಖರೀದಿಸಿದ್ದೆವು.‌ ಆದರೆ‌‌ 200ರಲ್ಲಿ 15 ರಿಂದ 20 ಧ್ವಜಗಳು ಮಾತ್ರ ಹಾರಿಸಲು ಯೋಗ್ಯವಾಗಿವೆ. ನಗರಸಭೆ ಸಿಬ್ಬಂದಿ ಹೇಗೆ ತಂದರೋ, ಧ್ವಜ ನಿರ್ಮಾಣ ಮಾಡುವವರು ಎಷ್ಟು ನಿರ್ಲಕ್ಷ್ಯ ವಹಿಸಿದ್ದಾರೋ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ:ಮೋದಿ ಮನ್ ಕಿ ಬಾತ್ ಪ್ರೇರಣೆ: ಬಾಳೆ ದಿಂಡಿನಿಂದ ಬದುಕು ಚಿನ್ನವಾಗಿಸಿಕೊಂಡ ಮಹಿಳೆ

ABOUT THE AUTHOR

...view details