ಕರ್ನಾಟಕ

karnataka

By

Published : Jul 30, 2021, 4:47 PM IST

ETV Bharat / state

ತಂದೆಯ ಜನ್ಮಸ್ಥಳ ಗಾಜನೂರಲ್ಲಿ ಶಿವಣ್ಣ, ಅಪ್ಪು: ಅಭಿಮಾನಿಗಳೊಂದಿಗೆ ಸೆಲ್ಫಿ, ಭರ್ಜರಿ ಬಾಡೂಟ

ಇಂದು ಬೆಳಗ್ಗೆ ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಗಾಜನೂರಿನ ಮನೆಗೆ ಭೇಟಿ ಮಾಡಿ, ಅಣ್ಣಾವ್ರು ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು.

shivaraj-kumar-and-puneeth-rajkumar-visit-chamarajanagar
ತಂದೆಯ ಜನ್ಮಸ್ಥಳ ಗಾಜನೂರಲ್ಲಿ ಶಿವಣ್ಣ, ಅಪ್ಪು

ಚಾಮರಾಜನಗರ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕುಟುಂಬದೊಂದಿಗೆ ತಮಿಳುನಾಡಿನ ಗಾಜನೂರಿಗೆ ಭೇಟಿ ನೀಡಿ ರಿಲ್ಯಾಕ್ಸ್ ಮಾಡಿದ್ದಾರೆ.

ತಂದೆಯ ಜನ್ಮಸ್ಥಳ ಗಾಜನೂರಲ್ಲಿ ಶಿವಣ್ಣ, ಅಪ್ಪು.

ಶಿವಣ್ಣ ಹಾಗೂ ಅಪ್ಪು ಗಾಜನೂರಿನ ಮನೆಗೆ ಭೇಟಿ ಮಾಡಿ, ಅಪ್ಪಾಜಿ ಧ್ಯಾನ ಮಾಡುತ್ತಿದ್ದ ಸ್ಥಳ, ತೋಟದಲ್ಲಿ ಸುತ್ತಾಡಿದರು. ಅಣ್ಣಾವ್ರು ಅಕ್ಕರೆಯಿಂದ ಕಟ್ಟಿಸಿದ ಮನೆಯಲ್ಲಿ ಇಡೀ ಕುಟುಂಬದೊಂದಿಗೆ ಕುಳಿತು ಬಾಡೂಟ ಸೇವಿಸಿದ್ದು ಬಳಿಕ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ನೆಚ್ಚಿನ ಚಿತ್ರನಟರು ಬಂದಿರುವ ವಿಚಾರ ತಿಳಿದ ಅಭಿಮಾನಿಗಳು ಅಣ್ಣಾವ್ರ ಮನೆಗೆ ಮುಗಿಬಿದ್ದು ಸೆಲ್ಫಿ ಕ್ಕಿಕ್ಕಿಸಿಕೊಂಡು ಸಂಭ್ರಮಿಸಿದರು.

ABOUT THE AUTHOR

...view details