ಚಾಮರಾಜನಗರ: ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಹೋಳಿಗೆ ಊಟ ಹಾಕಿಸುವ ಮೂಲಕ ಗಮನ ಸೆಳೆದಿದ್ದಾರೆ.
ಚುನಾವಣಾ ಅಧಿಕಾರಿಗಳಿಗೆ ಹೋಳಿಗೆ ಊಟ ಹಾಕಿಸಿದ ಶಿವಪುರ ಗ್ರಾ.ಪಂ - ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮ
ಚುನಾವಣೆಯಂದು ಸರಿಯಾದ ಊಟವಿಲ್ಲದೆ ಪರಿತಪಿಸುತ್ತಿದ್ದ ಚುನಾವಣಾ ಸಿಬ್ಬಂದಿ ಈ ಬಾರಿ ಹೋಳಿಗೆ ಊಟ ಸವಿದಿದ್ದಾರೆ. ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ, ಚುನಾವಣಾ ಸಿಬ್ಬಂದಿಗೆ ಹೋಳಿಗೆ ಊಟ ಹಾಕಿಸಿದ್ದಾರೆ.
ಇಂದು ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ. ಹೀಗಾಗಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಬೆಳಗ್ಗೆ ರವೆ ದೋಸೆ, ಉಪ್ಪಿಟ್ಟು-ಕೇಸರಿಬಾತ್ ಹಾಗೂ ಮಧ್ಯಾಹ್ನ ಚಪಾತಿ, ಅನ್ನ-ಸಾಂಬಾರ್, ಪಲ್ಯ, ಹಪ್ಪಳ, ಉಪ್ಪಿನಕಾಯಿ ಸೇರಿದಂತೆ ಹೋಳಿಗೆ ಊಟ ಹಾಕಿಸಲಾಗಿದೆ. ಕೊವೀಡ್‌ನಿಂದಾಗಿ ಕಳೆದ 9 ತಿಂಗಳುಗಳಿಂದ ಮುಚ್ಚಿದ್ದ ಅಕ್ಷರ ದಾಸೋಹ ಕೇಂದ್ರಗಳು ತೆರೆದಿದ್ದು, ಅಡುಗೆಯವರು ಮತಗಟ್ಟೆ ಅಧಿಕಾರಿಗಳಿಗೆ ಹೋಳಿಗೆ ಊಟ ಸಿದ್ಧಪಡಿಸಿ ಬಡಿಸಿದ್ದಾರೆ. ಕೆಲವೆಡೆ ಅಕ್ಷರ ದಾಸೋಹ ಸಿಬ್ಬಂದಿ ಬೇರೆಡೆ ಅಡುಗೆ ತಯಾರಿಸಿ, ಸಿಬ್ಬಂದಿಗೆ ಊಟ ನೀಡಿದ್ದಾರೆ.
ಚುನಾವಣೆಯಂದು ಸರಿಯಾದ ಊಟವಿಲ್ಲದೆ ಪರಿತಪಿಸುತ್ತಿದ್ದ ಚುನಾವಣಾ ಸಿಬ್ಬಂದಿ ಈ ಬಾರಿ ಹೋಳಿಗೆ ಊಟ ಸವಿದಿದ್ದಾರೆ. ಚಾಮರಾಜನಗರದಲ್ಲಿ ಮೊದಲ ಹಂತದ ಗ್ರಾಪಂ ಚುನಾವಣಾ ಕರ್ತವ್ಯಕ್ಕೆ ಒಟ್ಟು 2,700 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.