ಚಾಮರಾಜನಗರ: ಕಾಡೊಳಗೆ ಕುರಿ ಮೇಯಿಸಲು ಹೋಗಿದ್ದ ಕುರಿಗಾಹಿ ಕಾಡಾನೆಗೆ ಬಲಿಯಾಗಿರುವ ಘಟನೆ ಹನೂರು ತಾಲೂಕಿನ ಹೂಗ್ಯಂ ಸಮೀಪದ ಯರಂಬಾಡಿ ಗ್ರಾಮದಲ್ಲಿ ನಡೆದಿದೆ.
ಕುರಿ ಮೇಯಿಸಲು ಕಾಡೊಳಗೆ ಹೋದ ಕುರಿಗಾಹಿ ಕಾಡಾನೆ ದಾಳಿಗೆ ಬಲಿ - ಯರಂಬಾಡಿ ಕಾಡನೆ ದಾಳಿಗೆ ಕುರಿಗಾಯಿ ಬಲಿ
ಕುರಿ ಮೇಯಿಸಲು ಕಾಡಿಗೆ ಹೋಗಿದ್ದ ಕುರಿಗಾಹಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಯರಂಬಾಡಿ ಗ್ರಾಮದಲ್ಲಿ ಜರುಗಿದೆ.
ಕುರಿಗಾಹಿ ಕಾಡನೆಗೆ ಬಲಿ
ಯರಂಬಾಡಿ ಗ್ರಾಮದ ಬಸವೇಗೌಡ ಎಂಬವರ ಮಗ ಚನ್ನೇಗೌಡ ಗೌಡ (48) ಮೃತ ದುರ್ದೈವಿ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ಅರಣ್ಯವಾಪ್ತಿಯಲ್ಲಿ ಘಟನೆ ಜರುಗಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಘಟನೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜರುಗಿದ ಪರಿಣಾಮ ಪರಿಹಾರ ನೀಡಲಾಗುವುದಿಲ್ಲ. ಈ ಕುರಿತು ಮತ್ತೊಮ್ಮೆ ಪರಿಶೀಲಿಸುವುದಾಗಿ ಮಲೆಮಹದೇಶ್ವರ ವನ್ಯಜೀವಿ ಧಾಮದ ಡಿಎಫ್ಒ ಏಡುಕುಂಡಲು ತಿಳಿಸಿದ್ದಾರೆ.