ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತೆಗೆ ಪ್ಲಾಸ್ಮಾ ದಾನಮಾಡಿ ಮಾನವೀಯತೆ ಮೆರೆದ ಪುರಸಭಾ ಸದಸ್ಯ

ಕೊರೊನಾ ಸೋಂಕಿನಿಂದ ಆರೋಗ್ಯ ಹದಗೆಟ್ಟು ನರಳುತ್ತಿದ್ದ ಮೈಸೂರಿನ ಮೂಲದ ಮಹಿಳೆಯೊಬ್ಬರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಪಟ್ಟಣ ಪುರಸಭಾ ಸದಸ್ಯ ಶಶಿಧರ್ ಪಿ ದೀಪು ಮಾನವೀಯತೆ ಮೆರೆದಿದ್ದಾರೆ.

Shashidhar P Deepu donates plasma to corona patient in chamarajanagara
'ಪ್ಲಾಸ್ಮಾಧಾನ'ಮಾಡಿ ಮಾನವೀಯತೆ ಮೆರೆದ ಪುರಸಭಾ ಸದಸ್ಯ ಶಶಿಧರ್ ಪಿ. ದೀಪು

By

Published : Sep 20, 2020, 2:48 PM IST

ಗುಂಡ್ಲುಪೇಟೆ: ಕೊರೊನಾದಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಪ್ಲಾಸ್ಮಾ ದಾನ ಮಾಡಿ ಪಟ್ಟಣ ಪುರಸಭಾ ಸದಸ್ಯ ಶಶಿಧರ್ ಪಿ ದೀಪು ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನಲ್ಲಿ ಓರ್ವ ಮಹಿಳೆಗೆ ಕೊರೊನಾ ಸೋಂಕು ಧೃಢಪಟ್ಟು, ಆರೋಗ್ಯ ತೀರಾ ಹದಗೆಟ್ಟಿತ್ತು. ಆಕೆಗೆ o+ ಗ್ರೂಪ್ ನ ಪ್ಲಾಸ್ಮಾ ತೀರಾ ಅವಶ್ಯಕತೆ ಇರುವುದನ್ನು ವಾಟ್ಸ್ಆ್ಯಪ್​ ಸಂದೇಶದ ಮೂಲಕ ತಿಳಿದ ಶಶಿಧರ್ ದೀಪು ತಕ್ಷಣ ಆಸ್ಪತ್ರೆಗೆ ತೆರಳಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಪರಿಣಾಮ ಇದೀಗ ಕೊರೊನಾ ಸೋಂಕಿಗೆ ತುತ್ತಾದ ಮಹಿಳೆ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.

ಈ ಹಿಂದೆ ಪುರಸಭಾ ಸದಸ್ಯರಾದ ಶಶಿಧರ್ ಪಿ ದೀಪು ಅವರಿಗೂ ಕೊರೊನಾ ಸೋಂಕು ತಗುಲಿ ಚಾಮರಾಜನಗರ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದ ತರುವಾಯ ಗುಣಮುಖರಾಗಿ ಮನೆಗೆ ವಾಪಸಾಗಿದ್ದರು. ಆದರೀಗ ಮತ್ತೊಬ್ಬರ ಜೀವ ಉಳಿಸುವಲ್ಲಿ ಇವರು ತೋರಿರುವ ಕಾಳಜಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಈ ಕುರಿತು ಮಾತನಾಡಿದ ಅವರು, ಕೊರೊನಾ ಸೋಂಕಿನ ಬಗ್ಗೆ ಯಾರೊಬ್ಬರು ಭಯಪಡುವ ಅವಶ್ಯಕತೆ ಇಲ್ಲ. ಇದಕ್ಕೆ ಸರ್ಕಾರದ ನಿಯಮಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡಿದರೆ ಸಾಕು ಸೋಂಕನ್ನು ತಡೆಗಟ್ಟಬಹುದು. ಜೊತೆಗೆ ಸೋಂಕು ಧೃಡ ಪಟ್ಟ ವ್ಯಕ್ತಿಗಳಿಗೆ ಪ್ಲಾಸ್ಮಾದ ಅವಶ್ಯಕವಿದ್ದರೆ ಎಲ್ಲರು ಸಹಾಯಕ್ಕೆ ಮುಂದಾಗಬೇಕು ಎಂದಿದ್ದಾರೆ.

ಏನಿದು ಪ್ಲಾಸ್ಮಾ ಚಿಕಿತ್ಸೆ?

ಒಬ್ಬ ವ್ಯಕ್ತಿಯು ವೈರಸ್​​ನಿಂದ ಸೋಂಕಿಗೆ ಒಳಗಾದಾಗ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯವನ್ನು ಅಭಿವೃದ್ಧಿಪಡಿಸುತ್ತದೆ. ಈ ಪ್ರತಿಕಾಯಗಳು ಆ ನಿರ್ದಿಷ್ಟ ಸೂಕ್ಷ್ಮಾಣುಜೀವಿಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯನ್ನು ನೀಡಿದಾಗ ಅವರ ದೇಹವು ಪ್ರತಿಕಾಯವನ್ನು ಅಭಿವೃದ್ಧಿಪಡಿಸುತ್ತದೆ. ನಂತರ ವ್ಯಕ್ತಿಯು ರೋಗದಿಂದ ಗುಣಮುಖರಾಗುತ್ತಾರೆ.

ABOUT THE AUTHOR

...view details