ಕರ್ನಾಟಕ

karnataka

ETV Bharat / state

ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ: ಮನೆಗಳಿಗೆ ನುಗ್ಗಿದ ಚರಂಡಿ ನೀರು - ಕೋಡಿಮೋಳೆ ಗ್ರಾಮ ಮನೆಗೆ ನುಗ್ಗಿದ ಚರಂಡಿ ನೀರು

ಈಗಾಗಲೇ 5 ವರ್ಷಗಳಿಂದಲೂ ಮಳೆ ಬಂದಾಗ ಇದೇ ಫಜೀತಿ ಅನುಭವುಸುತ್ತಿದ್ದಾರೆ. ಮೊದಲು ಚರಂಡಿ ನಿರ್ಮಿಸಿ ಬಳಿಕ ರಸ್ತೆ ಮಾಡಬೇಕಿತ್ತು. ಆದರೆ ರಸ್ತೆ ಮಾಡಿ ಚರಂಡಿ ನಿರ್ಮಾಣ ಮಾಡದೇ ಇರುವುದು ಈ ಅವಾಂತರಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

sewage-water-went-into-homes-in-chamarajangar
ಕೋಡಿಮೋಳೆ

By

Published : Feb 19, 2021, 7:59 PM IST

ಚಾಮರಾಜನಗರ: ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ ಹಿನ್ನೆಲೆ ಇಂದು ಸುರಿದ ಮಳೆಗೆ ಕೆಲವು ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ನಡೆದಿದೆ.

ಮನೆಗಳಿಗೆ ನುಗ್ಗಿದ ಚರಂಡಿ ನೀರು

ಗ್ರಾಮದ ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆಯಲ್ಲಿರುವ ಹಳೇ ಚರಂಡಿಯ ಅಸಮರ್ಪಕ ನಿರ್ವಹಣೆಯಿಂದಾಗಿ ಹತ್ತಾರು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಈಗಾಗಲೇ 5 ವರ್ಷಗಳಿಂದಲೂ ಮಳೆ ಬಂದಾಗ ಇದೇ ಫಜೀತಿ ಅನುಭವುಸುತ್ತಿದ್ದಾರೆ. ಮೊದಲು ಚರಂಡಿ ನಿರ್ಮಿಸಿ ಬಳಿಕ ರಸ್ತೆ ಮಾಡಬೇಕಿತ್ತು. ಆದರೆ ರಸ್ತೆ ಮಾಡಿ ಚರಂಡಿ ನಿರ್ಮಾಣ ಮಾಡದೇ ಇರುವುದು ಈ ಅವಾಂತರಕ್ಕೆ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಂಸದರು, ಶಾಸಕ ಹಾಗೂ ಗ್ರಾಪಂ ಸದಸ್ಯರಿಗೆ ಹೇಳಿ ಹೇಳಿ ಸಾಕಾಗಿದೆ. ಮಳೆ ಬಂದ್ರೆ ಸಂತಸ ಪಡಬೇಕೋ, ಇಲ್ಲ ಯಾಕಾದ್ರೂ ಮಳೆ ಬಂತಪ್ಪಾ ಅಂತ ವ್ಯಥೆ ಪಡಬೇಕೋ ಎನ್ನುವ ಪರಿಸ್ಥಿತಿ ನಮ್ಮದಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details