ಕರ್ನಾಟಕ

karnataka

ETV Bharat / state

ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಲೋಪ: 7 ಮಂದಿ ಪೊಲೀಸ್‌ ಸಿಬ್ಬಂದಿಗೆ ಅಮಾನತು ಶಿಕ್ಷೆ - ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ಲೋಪಕ್ಕಾಗಿ ಪೊಲೀಸ್​ರ ಅಮಾನತು

ಚಾಮರಾಜನಗರ ಜಿಲ್ಲೆ ಹೆಗ್ಗವಾಡಿ ಕ್ರಾಸ್ ಹಾಗೂ ಪುಣಜನೂರು ಚೆಕ್ ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿದ್ದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

seven Police Staff Suspended in Chamarajanagar
ಪೊಲೀಸ್​ರ ಅಮಾನತು

By

Published : Mar 29, 2020, 10:41 AM IST

ಚಾಮರಾಜನಗರ: ಚೆಕ್ ಪೋಸ್ಟ್​ಗಳಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್ ಕುಮಾರ್ ಏಳು ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಯಾರೆಲ್ಲಾ ಅಮಾನತು?

ಚಾಮರಾಜನಗರ ಗ್ರಾಮಾಂತರ ಠಾಣೆಯ ಎಎಸ್ಐ ಕೂಸಪ್ಪ, ಸೈಯದ್ ರಫಿ, ಪ್ರಸಾದ್, ಅಬ್ದುಲ್ ಖಾದರ್ ಹಾಗೂ ಚಾಮರಾಜನಗರ ಪೂರ್ವ ಠಾಣೆಯ ಮಹಾದೇವಸ್ವಾಮಿ, ಮಹೇಶ್, ಡಿವೈಎಸ್ಪಿ ಕಚೇರಿಯ ರೇವಣ್ಣಸ್ವಾಮಿ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.

ಹೆಗ್ಗವಾಡಿ ಕ್ರಾಸ್ ಹಾಗೂ ಪುಣಜನೂರು ಚೆಕ್ ಪೋಸ್ಟ್‌ಗಳಲ್ಲಿ ಕರ್ತವ್ಯ ಲೋಪ ಎಸಗಿ, ಪೂರ್ವಾನುಮತಿ ಇಲ್ಲದೇ ಹೆಚ್ಚು ವಾಹನಗಳನ್ನು ಬಿಟ್ಟಿರುವ ಆರೋಪ ಇವರ ಮೇಲಿದೆ.

ಇನ್ನು ಕಂದಾಯ ವಿಭಾಗದ 6 ಜನ ನೌಕರರನ್ನು ಶನಿವಾರ ಡಿಸಿ ಅಮಾನತುಗೊಳಿಸಿದ್ದರು.

ABOUT THE AUTHOR

...view details