ಚಾಮರಾಜನಗರ: ಹಣಕಾಸು ವಿಚಾರದಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದು ಮೂವರು ಮೃತಪಟ್ಟಿದ್ದ, ಗುಂಡ್ಲುಪೇಟೆ ಜಾಕೀರ್ ಹುಸೇನ್ ನಗರದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುಂಡ್ಲುಪೇಟೆ ಮಾರಾಮಾರಿ ಪ್ರಕರಣ: ಮತ್ತೆ 7 ಜನ ಪೊಲೀಸರ ವಶಕ್ಕೆ - ಗುಂಡ್ಲುಪೇಟೆ ಮಾರಾಮಾರಿ ಪ್ರಕರಣ
ಗುಂಡ್ಲುಪೇಟೆ ಜಾಕೀರ್ ಹುಸೇನ್ ನಗರದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
![ಗುಂಡ್ಲುಪೇಟೆ ಮಾರಾಮಾರಿ ಪ್ರಕರಣ: ಮತ್ತೆ 7 ಜನ ಪೊಲೀಸರ ವಶಕ್ಕೆ chamarajanagar](https://etvbharatimages.akamaized.net/etvbharat/prod-images/768-512-7413353-796-7413353-1590856937039.jpg)
ಚಾಮರಾಜ ನಗರ
ಈ ಘಟನೆ ನಡೆದ ಮರುದಿನವೇ 18 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸರು, ಮೊದಲಿಗೆ ಜಮೀರ್, ಸುಹೇಲ್, ಏಜಸ್, ಇಕ್ರಂ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದರು. ಬಳಿಕ, ಪರಾರಿಯಾಗಿದ್ದವರ ಪತ್ತೆಗೆ ಬಲೆ ಬೀಸಿ ಹನ್ಸ್, ಅನೀಸ್, ಇನ್ನಾ ಎಂಬವವರನ್ನು ಇಂದು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಎಸ್ಪಿ ಎಚ್.ಡಿ.ಆನಂದ ಕುಮಾರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಎಎಸ್ಪಿ ಅನಿತಾ ಹದ್ದಣ್ಣನವರ್, ಡಿವೈಎಸ್ಪಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು ಪರಾರಿಯಾಗಿರುವವರ ಪತ್ತೆಗೆ ಬಲೆ ಬೀಸಿದ್ದಾರೆ.