ಕರ್ನಾಟಕ

karnataka

ಚಾಮರಾಜನಗರ: ಕೊರೊನಾ ಸೇನಾನಿಗಳು ಸೋಂಕಿತರಾದರೆ ಪ್ರತ್ಯೇಕ ಆರೈಕೆ

ಜಿಲ್ಲೆಯ 25 ಕ್ಕೂ ಹೆಚ್ಚು ಕೊರೊನಾ ಯೋಧರು ಸೋಂಕಿತರಾಗಿದ್ದಾರೆ. ಕೊರೊನಾ ಸೇನಾನಿಗಳ ರಕ್ಷಣೆಗೆ ನೈತಿಕವಾಗಿ ಬಲ ತುಂಬುವ ಅನಿವಾರ್ಯತೆ ಇರುವುದರಿಂದ ಜಿಲ್ಲಾಡಳಿತ ಕೊರೊನಾ ವಾರಿಯರ್ಸ್​ಗಳಿಗಾಗಿಯೇ ವಿಶೇಷ ಆಸ್ಥೆ ವಹಿಸಿ 50 ಹಾಸಿಗೆಗಳ ವಾರ್ಡ್ ರೂಪಿಸಲಾಗಿದೆ.

By

Published : Jul 21, 2020, 5:35 PM IST

Published : Jul 21, 2020, 5:35 PM IST

Chamarajanagar
ಕೊರೊನಾ ಸೇನಾನಿಗಳು ಸೋಂಕಿತರಾದರೇ ಪ್ರತ್ಯೇಕ ಆರೈಕೆ

ಚಾಮರಾಜನಗರ:ಕೊರೊನಾ ಹೋರಾಟದಲ್ಲಿ ಮುನ್ನೆಲೆಯಾಗಿ ನಿಂತು ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ,‌ ಪೊಲೀಸರು ಹಾಗೂ ಸ್ಥಳೀಯ ಆಡಳಿತ ಸಿಬ್ಬಂದಿ ಸೋಂಕಿಗೆ ತುತ್ತಾದರೆ ಪ್ರತ್ಯೇಕವಾಗಿ ಮತ್ತು ವಿಶೇಷ ಆರೈಕೆ ಮಾಡಲು ಚಾಮರಾಜನಗರ ಜಿಲ್ಲಾಡಳಿತ ಮುಂದಾಗಿದೆ.

ಈಗಾಗಲೇ ಜಿಲ್ಲೆಯ 25 ಕ್ಕೂ ಹೆಚ್ಚು ಕೊರೊನಾ ಯೋಧರು ಸೋಂಕಿತರಾಗಿದ್ದಾರೆ. ಕೊರೊನಾ ಸೇನಾನಿಗಳ ರಕ್ಷಣೆಗೆ ನೈತಿಕವಾಗಿ ಬಲ ತುಂಬುವ ಅನಿವಾರ್ಯತೆ ಇರುವುದರಿಂದ ಜಿಲ್ಲಾಡಳಿತ ಕೊರೊನಾ ವಾರಿಯರ್ಸ್​ಗಳಿಗಾಗಿಯೇ ವಿಶೇಷ ಆಸ್ಥೆ ವಹಿಸಿ 50 ಹಾಸಿಗೆಗಳ ವಾರ್ಡ್ ರೂಪಿಸಲಾಗಿದೆ.

ಬೇಡರಪುರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಜ್ಜುಗೊಂಡಿದ್ದು, ಅದರಲ್ಲಿ 50 ಹಾಸಿಗೆಗಳನ್ನು ಕೊರೊನಾ ವಾರಿಯರ್ಸ್‌ಗೆ ಮೀಸಲಿರಿಸಲಾಗಿದೆ. ಈಗಾಗಲೇ, ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಸಂತೇಮರಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರವನ್ನು ಜಿಲ್ಲೆಯ ಎರಡನೇ ಕೋವಿಡ್ ಆಸ್ಪತ್ರೆಯನ್ನಾಗಿ ಬದಲಾಯಿಸಲಾಗುತ್ತಿದೆ.

ABOUT THE AUTHOR

...view details