ಚಾಮರಾಜನಗರ: ಮೇಲಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಜಿಲ್ಲಾ ಖಜಾನೆಯ ನೌಕರನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.
ಮೇಲಧಿಕಾರಿ ಕಿರುಕುಳ ಆರೋಪ: ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ನೌಕರ..! - ಖಜಾನೆ ಇಲಾಖೆ ನೌಕರ ಆತ್ಮಹತ್ಯೆ ಯತ್ನ
ನನ್ನ ಮಗಳು ಡಿಗ್ರಿ ಓದುತ್ತಿದ್ದು, ಸ್ಟ್ರಾಂಗ್ ರೂಂ ಡ್ಯೂಟಿಗೆ ಹಾಕಿದರೇ ಅವಳ ಓದಿಗೆ ಅಡಚಣೆಯಾಗುತ್ತದೆ ಎಂದು ಪರಿಪರಿಯಾಗಿ ವಿನಂತಿಸಿದರೂ ಅದೇ ಕೆಲಸಕ್ಕೆ ಹಾಕಿ ನೋಟಿಸ್ ಕೊಟ್ಟಿದ್ದಾರೆ. ಅಲ್ಲದೆ ನೌಕರಿ ಮಾಡದಂತೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ರೋಸಿಹೋಗಿದ್ದೇನೆ ಎಂದು ಯೂಸುಫ್ ಅಳಲು ತೋಡಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲಾ ಖಜಾನೆ ಇಲಾಖೆ
ಜಿಲ್ಲಾ ಖಜಾನೆ ಇಲಾಖೆಯ ಸಿ ಗ್ರೂಪ್ ನೌಕರ ಯೂಸುಫ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ. ಮೇಲಧಿಕಾರಿ ವರಲಕ್ಷ್ನಿ ಎಂಬವರು ಸುಖಾಸುಮ್ಮನೆ ಕಿರುಕುಳ ಕೊಡುತ್ತಿದ್ದಾರೆ. ನನ್ನ ಮಗಳು ಡಿಗ್ರಿ ಓದುತ್ತಿದ್ದು, ಸ್ಟ್ರಾಂಗ್ ರೂಂ ಡ್ಯೂಟಿಗೆ ಹಾಕಿದರೇ ಅವಳ ಓದಿಗೆ ಅಡಚಣೆಯಾಗುತ್ತದೆ ಎಂದು ಪರಿಪರಿಯಾಗಿ ವಿನಂತಿಸಿದರೂ ಅದೇ ಕೆಲಸಕ್ಕೆ ಹಾಕಿ ನೋಟಿಸ್ ಕೊಟ್ಟಿದ್ದಾರೆ. ಅಲ್ಲದೇ ನೌಕರಿ ಮಾಡದಂತೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ರೋಸಿಹೋಗಿದ್ದೇನೆ ಎಂದು ಯೂಸುಫ್ ಅಳಲು ತೋಡಿಕೊಂಡಿದ್ದಾರೆ.