ಚಾಮರಾಜನಗರ :ಜೆಡಿಎಸ್ ಅಪ್ಪಮಕ್ಕಳ ಪಕ್ಷ ಎಂದು ಕರೆಯುತ್ತಾರೆ. ಹಾಗಾದರೆ, ಕಾಂಗ್ರೆಸ್ ತಾಯಿ-ಮಗನ, ಅಪ್ಪ-ಮಗನ ಪಕ್ಷವೇ ಎಂದು ಶಾಸಕ ಸಾ ರಾ ಮಹೇಶ್ ಟೀಕಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾತೆತ್ತಿದ್ದರೇ ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಅಂತೀರಲ್ಲಾ ನಿಮ್ಮದು ಯಾವ ಪಕ್ಷ ? ನಿಮ್ಮ ಮೇಡಂ ಇದ್ದರಲ್ಲಾ, ಅವರ ಮಗ ಇದ್ದರಲ್ಲ. ಹಾಗಾದ್ರೆ, ಕಾಂಗ್ರೆಸ್ ತಾಯಿ-ಮಗನಾ ಪಕ್ಷವೇ ? ಮೈಸೂರು ಜಿಲ್ಲೆಯಲ್ಲಿ ಮಗನಿಗಾಗಿ ಬಾದಾಮಿಗೆ ಹೋಗಿದ್ರಲ್ಲ, ನಿಮ್ಮದು ಅಪ್ಪ ಮಗನ ಪಕ್ಷವೇ ಎಂದು ಕೈ ಪಾಳೆಯವನ್ನು ತರಾಟೆಗೆ ತೆಗೆದುಕೊಂಡರು.
ನಾವು ಅಧಿಕಾರಕ್ಕೆ ಬಂದರೆ ಅನುದಾನದ ಹೊಳೆ ಹರಿಸಿಬಿಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಕೇಂದ್ರದಲ್ಲೂ ನಿಮ್ಮದೇ ಸರ್ಕಾರ, ರಾಜ್ಯದಲ್ಲೂ ನಿಮ್ಮದೆ ಸರ್ಕಾರವಿದೆ. ಏನು ಅಭಿವೃದ್ದಿ ಮಾಡಿದ್ದೀರಿ? ನಿಮ್ಮ ಸರ್ಕಾರದಲ್ಲಿ ಮಂಜೂರಾದ ಒಂದು ಲಕ್ಷದ ಆಶ್ರಯ ಮನೆಗಳಿಗೆ ಇನ್ನೂ ಬಿಲ್ಲು ಆಗಿಲ್ಲ.