ಕರ್ನಾಟಕ

karnataka

ETV Bharat / state

ಪರೀಕ್ಷೆ ಮುಗಿದ ಬಳಿಕ ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸ್​: ಗಣಿತ ಪರೀಕ್ಷೆಗೆ ಚಾಮರಾಜನಗರದಲ್ಲಿ ಸಿದ್ಧತೆ - Chamarajanagar

ಇಂಗ್ಲಿಷ್ ಪರೀಕ್ಷೆ ಮುಗಿದ ಬಳಿಕ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಪರೀಕ್ಷಾ ಕೊಠಡಿಗಳನ್ನು ಶುಚಿಗೊಳಿಸಿ, ಗಣಿತ ಪರೀಕ್ಷೆಗೆ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಬಾಲರ ಪಟ್ಟಣದ ಶಾಲೆಯ ಮುಖ್ಯೋಪಾಧ್ಯಾಯ ಸುಜಯ್ ಕುಮಾರ್ ಹೇಳಿದ್ದಾರೆ.

ಪರೀಕ್ಷೆ ಮುಗಿದ ಬಳಿಕ ಸ್ಯಾನಿಟೈಸೇಶನ್
ಪರೀಕ್ಷೆ ಮುಗಿದ ಬಳಿಕ ಸ್ಯಾನಿಟೈಸೇಶನ್

By

Published : Jun 25, 2020, 6:40 PM IST

ಚಾಮರಾಜನಗರ: ಕೊರೊನಾ ಆತಂಕದ ನಡುವೆಯೂ ಸುಸೂತ್ರವಾಗಿ ಜಿಲ್ಲೆಯಲ್ಲಿ ಎಸ್​ಎಸ್​ಎಲ್​ಸಿ ಇಂಗ್ಲಿಷ್ ಪರೀಕ್ಷೆ ಮುಗಿದಿದ್ದು, ಗಣಿತ ಪರೀಕ್ಷೆಗೆ ಚಾಮರಾಜನಗರ ತಯಾರಾಗಿದೆ.

ಪರೀಕ್ಷೆ ಮುಗಿದ ಬಳಿಕ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಪರೀಕ್ಷಾ ಕೊಠಡಿಗಳನ್ನು ಶುಚಿಗೊಳಿಸಿ, ಗಣಿತ ಪರೀಕ್ಷೆಗೆ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.

ಪರೀಕ್ಷೆ ಮುಗಿದ ಬಳಿಕ ಸ್ಯಾನಿಟೈಸ್​

ಯಾವುದೇ ಅತಂಕವಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಪ್ರತೀ ಪರೀಕ್ಷೆ ಬಳಿಕ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುವುದು. ಜ್ವರ ಇಲ್ಲವೇ ಶೀತ ಇರುವವರನ್ನು ಪ್ರತ್ಯೇಕವಾಗಿ ಬರೆಸಲಾಗುತ್ತದೆ. ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದೇವೆಂದು ಬಾಲರಪಟ್ಟಣದ ಶಾಲೆಯ ಮುಖ್ಯೋಪಾಧ್ಯಾಯ ಸುಜಯ್ ಕುಮಾರ್ ತಿಳಿಸಿದರು.

ABOUT THE AUTHOR

...view details