ಕರ್ನಾಟಕ

karnataka

ETV Bharat / state

ಕೈ-ಕಾಲು ಕಟ್ಟಿ ವೃದ್ಧನನ್ನು ಕೊಂದ ಶ್ರೀಗಂಧ ಮರಗಳ್ಳರು.. ಬೆಚ್ಚಿಬಿದ್ದ ಚಾಮರಾಜನಗರ ಜಿಲ್ಲೆ! - ಪಂಚೆಯಿಂದ ಉಸಿರುಗಟ್ಟಿಸಿ ಕೊಲೆ

ಶ್ರೀಗಂಧದ ಮರ ಕಳ್ಳತನಕ್ಕೆಂದು ಬಂದಿದ್ದ ವೇಳೆ ಆರೋಪಿಗಳು ಮನೆಯ ಮುಂದೆ ಮಲಗಿದ್ದ ವೃದ್ಧನನ್ನು ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

sandalwood thieves
ಶ್ರೀಗಂಧ

By

Published : Oct 5, 2020, 9:55 AM IST

ಚಾಮರಾಜನಗರ:ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಬಂದ ಖದೀಮರು ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ.

ಶ್ರೀಗಂಧದ ಮರ

ಶಿವಬಸಪ್ಪ(75) ಕೊಲೆಯಾದವರು. ಮನೆ ಮುಂದೆ ಇದ್ದ ಶ್ರೀಗಂಧದ ಮರವನ್ಬು ಕದಿಯಲು ಬಂದಿದ್ದ ವೇಳೆ ಮನೆ ಹೊರಗಡೆ ಮಲಗಿದ್ದ ವೃದ್ಧ ಶಿವಬಸಪ್ಪನ ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಂದು ಮಾಳವೊಂದರಲ್ಲಿ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.

ಶ್ವಾನದಳ ವೃದ್ಧನ ಮೃತದೇಹ ಪತ್ತೆ ಮಾಡಿದೆ. ಕಳ್ಳರು ಶ್ರೀಗಂಧದ ಮರವನ್ನು ಅರ್ಧ ಕತ್ತರಿಸಿ ಪರಾರಿಯಾಗಿದ್ದಾರೆ. ಚಾಮರಾಜನಗರ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details