ಚಾಮರಾಜನಗರ: ಭರ್ಜರಿ ಹಾಗೂ ಬಹದ್ದೂರ್ ನಂತಹ ಹಿಟ್ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್, ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ.
ಭಕ್ತಿ ಮೆರೆದ ಸ್ಟಾರ್ ಡೈರೆಕ್ಟರ್: ಬಾಯಿಗೆ ಬೀಗ ಹಾಕಿ ಕುಟುಂಬದ ಪರಂಪರೆ ಪಾಲನೆ - undefined
ಕಳೆದ 5 ವರ್ಷಗಳಿಂದ ಗ್ರಾಮ ದೇವತೆ ಹಬ್ಬದಲ್ಲಿ ಪಾಲ್ಗೊಂಡು, ಬಾಯಿ ಬೀಗ ಸೇವೆಯನ್ನು ತೀರಿಸುತ್ತಿದ್ದಾರಂತೆ ನಿರ್ದೇಶಕ ಚೇತನ್ ಕುಮಾರ್.
![ಭಕ್ತಿ ಮೆರೆದ ಸ್ಟಾರ್ ಡೈರೆಕ್ಟರ್: ಬಾಯಿಗೆ ಬೀಗ ಹಾಕಿ ಕುಟುಂಬದ ಪರಂಪರೆ ಪಾಲನೆ](https://etvbharatimages.akamaized.net/etvbharat/prod-images/768-512-3290740-thumbnail-3x2-chetan.jpg)
ಭರ್ಜರಿ, ಬಹದ್ದೂರ್ ಬಳಿಕ ಭರಾಟೆ ಸಿನಿಮಾ ನಿರ್ದೇಶಿಸಿರುವ ಚೇತನ್ ಕುಮಾರ್, ಇಂದು ಹುಟ್ಟೂರಾದ ಹನೂರು ತಾಲೂಕಿನ ಅಜ್ಜೀಪುರದಲ್ಲಿ ನಡೆದ ಕೋಟೆ ಮಾರಮ್ಮದೇವಿ ಹಬ್ಬದಲ್ಲಿ ಬಾಯಿಗೆ ಬೀಗ ಹಾಕಿಕೊಂಡು, ತಲೆತಲಾಂತರಗಳಿಂದ ತಮ್ಮ ಕುಟುಂಬ ನಡೆಸಿಕೊಂಡು ಬರುತ್ತಿರುವ ಪರಂಪರೆಯನ್ನು ಮುಂದುವರೆಸಿದರು. ಇವರು ಕಳೆದ 5 ವರ್ಷಗಳಿಂದ ಗ್ರಾಮದೇವತೆ ಹಬ್ಬದಲ್ಲಿ ಪಾಲ್ಗೊಂಡು ಬಾಯಿ ಬೀಗ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಅದ್ದೂರಿಯಲ್ಲಿ ಸಹಾಯಕ ನಿರ್ದೇಶನದ ಬಳಿಕ ಭರ್ಜರಿ, ಬಹದ್ದೂರ್ ಚಿತ್ರಗಳ ಮೂಲಕ ಮಾಸ್ ಪ್ರೇಕ್ಷಕರ ಮನ ಗೆದ್ದಿರುವ ಚೇತನ್, ಗ್ರಾಮದೇವತೆ ಹಬ್ಬದಲ್ಲಿ ಪಾಲ್ಗೊಂಡು ಕುಟುಂಬದ ಪಾರಂಪಾರಿಕ ಸೇವೆ ಸಲ್ಲಿಸುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.