ಚಾಮರಾಜನಗರ: ಶ್ರೀಗಂಧದ ಮರಗಳನ್ನು ಕಡಿಯುವುದನ್ನು ತಡೆಯಲು ಹೋದ ಶಿಕ್ಷಕನಿಗೆ ಕಳ್ಳರು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ.
ಶ್ರೀಗಂಧದ ಮರಗಳ್ಳತನ: ತಡೆಯಲು ಹೋದ ಶಿಕ್ಷಕನ ಮೇಲೆ ಮಚ್ಚಿನಿಂದ ಹಲ್ಲೆ! - ಶ್ರೀಗಂಧದ ಮರಗಳ್ಳತನ ಕೌದಳ್ಳಿ ಸುದ್ದಿ
ಶ್ರೀಗಂಧದ ಮರಗಳನ್ನು ಕಡಿಯುವುದನ್ನು ತಡೆಯಲು ಹೋದ ಶಿಕ್ಷಕನಿಗೆ ಕಳ್ಳರು ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ನಡೆದಿದೆ.
ಶ್ರೀಗಂಧದ ಮರಗಳ್ಳತನ
ಶಿಕ್ಷಕ ಜಬೀವುಲ್ಲಾ ಹಲ್ಲೆಗೊಳಗಾದ ಶಿಕ್ಷಕರು. ಮನೆ ಮುಂದೆ ಬೆಳೆಸಿದ್ದ ಗಂಧದ ಮರವನ್ನು ರಾತ್ರಿ ವೇಳೆ ಕಡಿಯುತ್ತಿರುವುದನ್ನು ತಡೆಯಲು ಹೋದ ವೇಳೆ ಮಚ್ಚಿನಿಂದ ಜಬೀವುಲ್ಲಾಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಶ್ರೀಗಂಧದ ಮರದ ಖರೀದಿಗಾಗಿ ಇಬ್ಬರು ಅಪರಿಚಿತರು ಬಂದಿದ್ದ ವೇಳೆ ಜಬೀವುಲ್ಲಾ ನಿರಾಕರಿಸಿದ್ದರು ಎನ್ನಲಾಗಿದೆ.
ಇನ್ನು ಅವರೇ ಈ ಕೃತ್ಯ ಮಾಡಿದ್ದಾರೆಂದು ಜಬೀವುಲ್ಲಾ ಆರೋಪಿಸಿದ್ದಾರೆ. ಸದ್ಯ ರಾಮಾಪುರ ಪೊಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಲಾಗಿದೆ.