ಕರ್ನಾಟಕ

karnataka

ETV Bharat / state

ನೀರು ಕೇಳುವ ನೆಪದಲ್ಲಿ ದರೋಡೆ: ಮೂವರ ಬಂಧನ - ಚಾಮರಾಜನಗರದ ದರೋಡೆ ಸುದ್ದಿ

ನೀರು ಕೇಳುವ ನೆಪದಲ್ಲಿ ದರೋಡೆ ಮಾಡಿರುವ ಘಟನೆ ಚಾಮರಾಜನಗರ ಸಮೀಪದ ಮಾದಾಪುರದಲ್ಲಿ ನಡೆದಿದೆ. ಒಟ್ಟು ಆರು ಜನ ದರೋಡೆ ಮಾಡಿದ್ದು, ಮೂವರನ್ನು ಬಂಧಿಸಲಾಗಿದೆ.

ನೀರು ಕೇಳುವ ನೆಪದಲ್ಲಿ ದರೋಡೆ
ನೀರು ಕೇಳುವ ನೆಪದಲ್ಲಿ ದರೋಡೆ

By

Published : Sep 20, 2022, 3:21 PM IST

ಚಾಮರಾಜನಗರ:ನೀರು ಕೇಳುವ ನೆಪದಲ್ಲಿ ಕಾಂಕ್ರೀಟ್ ಪ್ಲಾಂಟ್​ನಲ್ಲಿ ದರೋಡೆ ಮಾಡಿದ್ದ, ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಲಾಗಿದೆ.

ಮೈಸೂರು ಮೂಲದ ನದೀಂಖಾನ್, ತನು, ಶಹಬ್ಬಾಜ್ ಬಂಧಿತ ಆರೋಪಿಗಳು‌.‌ ಚಾಮರಾಜನಗರ ಸಮೀಪದ ಮಾದಾಪುರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನೀರು ಕೇಳುವ ನೆಪದಲ್ಲಿ ಕಾಂಕ್ರೀಟ್ ಪ್ಲಾಂಟ್​ನಲ್ಲಿ, 1.64 ಲಕ್ಷ ಮೌಲ್ಯದ ಕಬ್ಬಿಣದ ವಸ್ತುಗಳನ್ನು 6 ಮಂದಿ ದರೋಡೆ ಮಾಡಿದ್ದರು.‌

ಇದನ್ನೂ ಓದಿ: ವಿದ್ಯುತ್ ಕಡಿತಗೊಳಿಸಿ ತಡರಾತ್ರಿ ಎಟಿಎಂ ದರೋಡೆ ಮಾಡಿದ ಕಳ್ಳರು

ಚಾಮರಾಜನಗರ ಪೂರ್ವ ಠಾಣೆ ಪಿಐ ಆನಂದ್ ನೇತೃತ್ವದಲ್ಲಿ ಮಹೇಶ್, ಪುಟ್ಟರಾಜು, ಚಂದ್ರಶೇಖರ್, ನಂದಕುಮಾರ್ ತಂಡ ಕಾರ್ಯಾಚರಣೆ ಕೈಗೊಂಡು ಈ ಮೂವರನ್ನು ಬಂಧಿಸಿದ್ದಾರೆ‌. ತಲೆಮರೆಸಿಕೊಂಡಿರುವ ಮೂವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇನ್ನು ಬಂಧಿತರಿಂದ ಲಕ್ಷಾಂತರ ಮೌಲ್ಯದ ಕಳ್ಳತನ ಮಾಡಿದ ವಸ್ತುಗಳು, ಒಂದು ಕಾರು, ಒಂದು ಗೂಡ್ಸ್ ಆಟೋ, ಮೊಬೈಲ್​, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ABOUT THE AUTHOR

...view details