ಕರ್ನಾಟಕ

karnataka

ETV Bharat / state

ಜಾರಕಿಹೊಳಿ ವಿರುದ್ಧ ಚಾಮರಾಜನಗರದಲ್ಲಿ ರಸ್ತೆ ತಡೆ.. 'ನಾನು ಹಿಂದೂ ಭಿತ್ತಿಪತ್ರ' ಪ್ರದರ್ಶನ - ಕಾಂಗ್ರೆಸ್ ಭೂಪಟ

ಹಿಂದೂ ಪದದ ಕುರಿತು ಸತೀಶ್ ಜಾರಕಿಹೊಳಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಅವರಿಗೆ ಗೌರವ ಕೊಡುವುದು ಅಸಹ್ಯವಾಗಿದೆ, ಕಾಂಗ್ರೆಸ್ ಭೂಪಟದಲ್ಲಿ ಕಾಣೆಯಾಗುತ್ತಿರುವುದರಿಂದ ಮತಿಭ್ರಮಣೆ ಆದವರ ರೀತಿ ಮಾತನಾಡುತ್ತಿದ್ದಾರೆ.

Road block at Chamarajanagar against  Jarakiholi satement
ಜಾರಕಿಹೊಳಿ ವಿರುದ್ಧ ಚಾಮರಾಜನಗರದಲ್ಲಿ ರಸ್ತೆ ತಡೆ

By

Published : Nov 9, 2022, 5:46 PM IST

ಚಾಮರಾಜನಗರ: ಹಿಂದೂ ಪದದ ಕುರಿತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ಮುಖಂಡರುಗಳು ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದ ತನಕ ಮೆರವಣಿಗೆ ನಡೆಸಿ ಸತೀಶ್ ಜಾರಕಿಹೊಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು‌. ನಾನು ಹಿಂದೂ, ನಾನು ಸ್ವಾಭಿಮಾನಿ ಹಿಂದೂ ಎಂಬ ಪೋಸ್ಟರ್ ಪ್ರದರ್ಶಿಸಿ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಸುಂದರ್ ಮತ್ತು ರಾಮಚಂದ್ರು ಉಪಸ್ಥಿತರಿದ್ದರು.

ಜಾರಕಿಹೊಳಿ ವಿರುದ್ಧ ಚಾಮರಾಜನಗರದಲ್ಲಿ ರಸ್ತೆ ತಡೆ- ನಾನು ಹಿಂದೂ ಭಿತ್ತಿಪತ್ರ ಪ್ರದರ್ಶನ

ಹಿಂದೂ ಪದದ ಕುರಿತು ಸತೀಶ್ ಜಾರಕಿಹೊಳಿ ವಿವಾದಾತ್ಮಕವಾಗಿ ಮಾತನಾಡಿದ್ದಾರೆ, ಅವರಿಗೆ ಗೌರವ ಕೊಡುವುದು ಅಸಹ್ಯವಾಗಿದೆ. ಕಾಂಗ್ರೆಸ್ ಭೂಪಟದಲ್ಲಿ ಕಾಣೆಯಾಗುತ್ತಿರುವುದರಿಂದ ಮತಿಭ್ರಮಣೆ ಆದವರ ರೀತಿ ಮಾತನಾಡುತ್ತಿದ್ದಾರೆ ಎಂದು ಕಾಡಾ ಅಧ್ಯಕ್ಷ ನಿಜಗುಣರಾಜು ವಾಗ್ದಾಳಿ ನಡೆಸಿದರು. ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು‌.

ಇದನ್ನೂ ಓದಿ:ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ; ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ

ABOUT THE AUTHOR

...view details