ಚಾಮರಾಜನಗರ: ಮದುವೆ ಮುಗಿಸಿ ಹಿಂತಿರುಗುತ್ತಿದ್ದಾಗ ಮೊಪೆಡ್ಗೆ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.
ಬೈಕ್ಗೆ ತಮಿಳುನಾಡು ಸಾರಿಗೆ ಬಸ್ ಡಿಕ್ಕಿ: ಸ್ಥಳದಲ್ಲೇ ನಗರಸಭೆ ಮಾಜಿ ಸದಸ್ಯ ಸಾವು - ಚಾಮರಾಜನಗರ
ಮೊಪೆಡ್ಗೆ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ. ಚಾಮರಾಜನಗರದ ನಗರಸಭಾ ಮಾಜಿ ಸದಸ್ಯ ಮಹೇಶ್ (43) ಮೃತ ದುರ್ದೈವಿ.
ಮೊಪೆಡ್ಗೆ ತಮಿಳುನಾಡು ಸಾರಿಗೆ ಬಸ್ ಡಿಕ್ಕಿ
ಚಾಮರಾಜನಗರದ ನಗರಸಭಾ ಮಾಜಿ ಸದಸ್ಯ ಮಹೇಶ್ (43) ಮೃತ ದುರ್ದೈವಿ. ಬೈಕ್ ಹಿಂಬದಿ ಸವಾರ ವೆಂಕಟಯ್ಯ ಎಂಬುವರಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಮಹೇಶ್ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಮದುವೆಗೆ ಹಾಜರಾಗಿ, ಹಿಂತಿರುಗುವಾಗ ಬಸ್ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ.
ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.