ಕರ್ನಾಟಕ

karnataka

ETV Bharat / state

ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬೈಕ್​​​ : ಒಬ್ಬನ ಸಾವು, ಇಬ್ಬರಿಗೆ ಗಾಯ - ನಿಯಂತ್ರಣ ತಪ್ಪಿ ಬಿದ್ದ ಬೈಕ್​ ಸವಾರ ಸಾವು

ಕೊಳ್ಳೇಗಾಲ ಪಟ್ಟಣದಿಂದ ಮುಳ್ಳೂರು ಗ್ರಾಮದ ಕಡೆಗೆ ಬೈಕ್​​ನಲ್ಲಿ ಯುವಕರು ವೇಗವಾಗಿ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಮೂವರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ.

rider dies after falling out of control
ಮೃತ ಯುವಕ

By

Published : May 16, 2020, 5:54 PM IST

ಕೊಳ್ಳೇಗಾಲ:ವೇಗವಾಗಿ ತೆರಳುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ, ಬೈಕ್​​ನಲ್ಲಿದ್ದ ಮೂವರ ಪೈಕಿ ಓರ್ವ ಮೃತಪಟ್ಟಿದ್ದಾನೆ.

ಇಲ್ಲಿನ ಚಿಕ್ಕನಾಯಕನ ಬೀದಿಯ ನಿವಾಸಿ ಸುದೀಪ್ (19) ಮೃತ ಯುವಕ. ಇದೇ ಬೀದಿಯ ಕೃಷ್ಣ ಮತ್ತು ಗಣೇಶ್ ಪ್ರಾಣಾಪಾಯದಿಂದ ಪಾರಾಗಿ ಗಾಯಗೊಂಡಿದ್ದಾರೆ.

ಕೊಳ್ಳೇಗಾಲ ಪಟ್ಟಣದಿಂದ ಮುಳ್ಳೂರು ಗ್ರಾಮದ ಕಡೆಗೆ ಮೂವರು ಒಂದೇ ಬೈಕ್​​ನಲ್ಲಿ ವೇಗವಾಗಿ ತೆರಳುತ್ತಿದ್ದರು. ಪರಿಣಾಮ ರಸ್ತೆ ಮಾರ್ಗದಲ್ಲಿರುವ ಹಂಪಾಪುರ ಗ್ರಾಮದ ಶನಿದೇವರ ದೇಗುಲದ ಬಳಿಯ ತಿರುವಿನಲ್ಲಿ ಬೈಕ್​ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ.

ಸುದೀಪ್ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್​.ಆಸ್ಪತ್ರೆಗೆ ರವಾನಿಸಿದರೂ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗಲಿಲ್ಲ. ‌ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details