ಚಾಮರಾಜನಗರ: ನಿವೃತ್ತ ಹೆಡ್ ಕಾನ್ಸ್ಟೇಬಲ್ವೊಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಬೆಂಡರವಾಡಿಯಲ್ಲಿ ನಡೆದಿದೆ.
ಚಾಮರಾಜನಗರದ ನಿವಾಸಿ ಗೋವಿಂದರಾಜು (64) ಮೃತರು. 10 ರಿಂದ15 ದಿನಗಳ ಹಿಂದೆಯೇ ಇವರು ಕೆರೆಗೆ ಹಾರಿ ಮೃತಪಟ್ಟಿದ್ದು, ಇಂದು ಕೊಳೆತ ಸ್ಥಿತಿಯಲ್ಲಿ ಶವ ತೇಲುತ್ತಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಕಳೆದ ತಿಂಗಳಾಂತ್ಯದಲ್ಲಿ ಗೋವಿಂದರಾಜು ಕಾಣೆಯಾಗಿದ್ದ ಬಗ್ಗೆ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿತ್ತು.