ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್​ಗೆ ಸಿಲುಕಿ ಬಾಲಕ ಸಾವು: ಅಚಾತುರ್ಯಕ್ಕೆ ಮರುಗಿ ಆತ್ಮಹತ್ಯೆಗೆ ಶರಣಾದ ಪಿಹೆಚ್​ಡಿ ವಿದ್ಯಾರ್ಥಿ - chamarajanagar latest news

ತನ್ನ ಅಚಾತುರ್ಯದಿಂದ ಬಾಲಕನ ಸಾವಿಗೆ ಪಶ್ಚಾತ್ತಾಪವಾಗಿ ಪಿಹೆಚ್​ಡಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

regret-for-killing-child-phd-suicide-in-mysore
ಟ್ರಾಕ್ಟರ್​ಗೆ ಸಿಲುಕಿ ಬಾಲಕ ಸಾವು: ತನ್ನ ಅಚಾತುರ್ಯಕ್ಕೆ ಕೊರಗಿ ಪಿಹೆಚ್​ಡಿ ವಿದ್ಯಾರ್ಥಿ ಆತ್ಮಹತ್ಯೆ..!

By

Published : Jul 8, 2021, 9:36 PM IST

Updated : Jul 8, 2021, 9:42 PM IST

ಚಾಮರಾಜನಗರ:ಟ್ರ್ಯಾಕ್ಟರ್​​ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದು ಇದರಿಂದ ನೊಂದ ಚಾಲಕನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸವಕನಹಳ್ಳಿಪಾಳ್ಯ ಎಂಬಲ್ಲಿ ನಡೆದಿದೆ.

ಸವಕನಹಳ್ಳಿಪಾಳ್ಯ ಗ್ರಾಮದ ಹರ್ಷ(5) ಎಂಬ ಬಾಲಕ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪಿಹೆಚ್​ಡಿ ಸಂಶೋಧನೆ ಕೈಗೊಂಡಿದ್ದ ಸುನೀಲ್(23) ಮೃತ ದುರ್ದೈವಿಗಳು. ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಜಮೀನೊಂದನ್ನು ಸಮತಟ್ಟು ಮಾಡುತ್ತಿದುದನ್ನು ನೋಡುತ್ತಾ ನಿಂತಿದ್ದ ಹರ್ಷ ಎಂಬ ಬಾಲಕನಿಗೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗುದ್ದಿದೆ. ಈ ವೇಳೆ ಸುನೀಲ್ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ.

ಈ ವೇಳೆ ಬಾಲಕನಿಗೆ ತೀವ್ರತರದ ಗಾಯಗಳಾಗಿವೆ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಇಂದು ಮಧ್ಯಾಹ್ನ ಬಾಲಕ ಅಸುನೀಗಿದ್ದಾನೆ. ಘಟನೆ ನಂತರ ಮೈಸೂರಿಗೆ ಪರಾರಿಯಾಗಿದ್ದ ಸುನೀಲ್​ ಆಸ್ಪತ್ರೆಯಲ್ಲಿ ಬಾಲಕ ಅಸುನೀಗಿದ ವಿಚಾರ ತಿಳಿದು, ಮನನೊಂದು ತಾನು ಉಳಿದುಕೊಂಡಿದ್ದ ರೂಮಿನಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಚುನಾವಣೆಯಲ್ಲಿ ಸೋತ ಅಣ್ಣಾಮಲೈಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ ಹೈಕಮಾಂಡ್​

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನ ಸಾವಿನ ಘಟನೆ ನಡೆದಿದೆ. ಮೈಸೂರಿನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಕ್ರಿಕೆಟ್‌ ಟೂರ್ನಮೆಂಟ್​ಗಾಗಿ ಗ್ರಾಮಸ್ಥರೊಬ್ಬರ ಟ್ರ್ಯಾಕ್ಟರ್ ಪಡೆದು ಸುನೀಲ್ ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.‌

Last Updated : Jul 8, 2021, 9:42 PM IST

ABOUT THE AUTHOR

...view details