ಕೊಳ್ಳೇಗಾಲ(ಚಾಮರಾಜನಗರ):ರೇಷ್ಮೆ ಮಾರುಕಟ್ಟೆಯ ರೀಲರ್ಸ್ ಹಾಗೂ ಅಲ್ಲಿನ ಅಧಿಕಾರಿಗಳ ನಡುವೆ ಕಳೆದ ಎರಡು ತಿಂಗಳಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ರೇಷ್ಮೆ ಖರೀದಿ ವಿಚಾರದಲ್ಲಿ ರೀಲರ್ಸ್ಗಳಿಗಿರುವ ಸಮಸ್ಯೆ ಬಗೆಹರಿಸದ ಅಧಿಕಾರಿಗಳು, ಸ್ವತಃ ಅಕ್ರಮವಾಗಿ ಕೆಲವು ದಲ್ಲಾಳಿಗಳ ಮೂಲಕ ಗೂಡು ಖರೀದಿ ಮಾಡಿಸುತ್ತಿದ್ದಾರೆ ಎಂದು ರೀಲರ್ಸ್ಗಳು ಗಂಭೀರ ಆರೋಪ ಮಾಡಿದ್ದಾರೆ.
ಇತ್ಯರ್ಥವಾಗದ ರೀಲರ್ಸ್ ಸಮಸ್ಯೆ: ರೇಷ್ಮೆ ಮಾರುಕಟ್ಟೆ ಅಧಿಕಾರಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದ ರೇಷ್ಮೆ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಮಾರಾಟ ವಹಿವಾಟು ಸಂಪೂರ್ಣ ಏರುಪೇರಾಗಿದೆ. ಇಲ್ಲಿನ ರೀಲರ್ಸ್ಗಳ ಸಮಸ್ಯೆಯನ್ನು ಬಗೆಹರಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೀಲರ್ಸ್ಗಳು ದೂರುತ್ತಿದ್ದು, ಇಲ್ಲಿನ ಮಾರುಕಟ್ಟೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ಮಾರುಕಟ್ಟೆಗೆ ಬರುವ ಗೂಡು ಖರೀದಿಯಲ್ಲಿ ಹೊರಗುಳಿದಿರುವ ರೀಲರ್ಸ್ಗಳು, ನಮ್ಮಲ್ಲಿ ತಯಾರಿಸಿ ಇಟ್ಟುಕೊಂಡಿರುವ ರೇಷ್ಮೆಯನ್ನು ಬೆಂಬಲ ಬೆಲೆಗೆ ಖರೀದಿಸಲು ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮವಹಿಸದೇ ರೀಲರ್ಸ್ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಇಲ್ಲಿನ ಮಾರುಕಟ್ಟೆ ಉಪ ನಿರ್ದೇಶಕ ರಾಚಪ್ಪ ಎಂಬುವವರನ್ನು ರೀಲರ್ಸ್ಗಳು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ರೀಲರ್ಸ್ಗಳ ಮಧ್ಯ ಒಡಕು ಮೂಡಿಸಿ ಮಾರುಕಟ್ಟೆಯಲ್ಲಿ ತಮಗೆ ತಿಳಿದಿರುವವರಿಂದ ಅಕ್ರಮವಾಗಿ ಗೂಡು ಖರೀದಿ ಮಾಡಿಸುತ್ತಿದ್ದಾರೆ. ಇದರಿಂದ ನಿಜವಾದ ರೀಲರ್ಸ್ಗಳಿಗೆ ಅನ್ಯಾಯವಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿದೆ ಎಂದು ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ ಶ್ರೀಧರ್ ಆರೋಪಿಸಿದ್ದಾರೆ.