ಚಾಮರಾಜನಗರ:ದೇವರ ರಥಕ್ಕೆ ಇಲ್ಲೊಬ್ಬ ಆರ್ಸಿಬಿ ಅಭಿಮಾನಿ, ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
'ಈ ಸಲ ಕಪ್ ನಮ್ದೆ' ಎಂದು ಬಾಳೆ ಹಣ್ಣಿನ ಮೇಲೆ ಬರೆದು ಮಾದಪ್ಪನ ತೇರಿಗೆ ಎಸೆದ ಆರ್ಸಿಬಿ ಅಭಿಮಾನಿ: ವಿಡಿಯೋ ವೈರಲ್ - ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಆರ್ಸಿಬಿ ಅಭಿಮಾನಿ
ದೇವರ ರಥಕ್ಕೆ ಇಲ್ಲೊಬ್ಬ ಆರ್ಸಿಬಿ ಅಭಿಮಾನಿ, ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು ಮಾದಪ್ಪನ ತೇರಿಗೆ ಎಸೆದಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಳೆದ 24 ರಂದು ರಥೋತ್ಸವ ಜರುಗಿತ್ತು. ಆ ವೇಳೆ, ಹನೂರಿನ ರಘು ಎಂಬ ಆರ್ಸಿಬಿಯ ಅಭಿಮಾನಿ. ಈ ಸಲವಾದರೂ ತಮ್ಮ ನೆಚ್ಚಿನ ತಂಡ ಚಾಂಪಿಯನ್ ಆಗಲೆಂದು ಮಹದೇಶ್ವರನ ಮೊರೆ ಹೋಗಿದ್ದಾರೆ. ಬಾಳೆ ಹಣ್ಣಿನ ಮೇಲೆ ಈ ಸಲ ಕಪ್ ನಮ್ದೆ ಎಂದು ಬರೆದು ಮಾದಪ್ಪನ ತೇರಿಗೆ ಎಸೆದು ಬೇಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್ಸಿಬಿ ಅಭಿಮಾನಿಗಳು ವಿರಾಟ್ ಪಡೆಯನ್ನು ಹುರಿದುಂಬಿಸಲು 'ಈ ಸಲ ಕಪ್ ನಮ್ದೆ' ಎಂಬ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿದ್ದರು. ಸತತ ಸೋಲಿನಿಂದ ಕಂಗೆಟ್ಟಿದ್ರೂ ಅಭಿಮಾನಿ ಬಳಗವೇನು ಕಮ್ಮಿಯಾಗಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ಸಲ ಕಪ್ ನಮ್ದೆ ಎಂಬ ಅಭಿಮಾನಿಗಳ ಉದ್ಘಾರ ಈ ಬಾರಿ ಮಲೆಮಹದೇಶ್ವರನಿಗೂ ತಲುಪಿರುವುದು ವಿಶೇಷ.