ಚಾಮರಾಜನಗರ :ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ದೇವರಿಗೆ ಕಾಣಿಕೆಯಾಗಿ ಭಕ್ತರು ಅರ್ಪಿಸಿದ್ದ 400 ಕೆಜಿ ಬೆಳ್ಳಿಯನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಯನ್ನಾಗಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.
ಮಾದಪ್ಪನ 400 ಕೆಜಿ ಅನುಪಯುಕ್ತ ಬೆಳ್ಳಿಯಾಗುತ್ತಿದೆ ಶುದ್ಧ ಗಟ್ಟಿ! - ಮಾದಪ್ಪನ 400 ಕೆಜಿ ಅನುಪಯುಕ್ತ ಬೆಳ್ಳಿಯಾಗುತ್ತಿದೆ ಶುದ್ಧ ಗಟ್ಟಿ
ಖಜಾನೆ ತುಂಬಿ ಹೋಗಿದ್ದರಿಂದ ಕೊಳ್ಳೇಗಾಲದ ಆಭರಣ ತಯಾರಕರನ್ನು ಕರೆಸಿ ಅನುಪಯುಕ್ತ ಬೆಳ್ಳಿ ಕರಗಿಸಿ 9-10 ಕೆಜಿಯ ಶುದ್ಧ ಬೆಳ್ಳಿ ಗಟ್ಟಿಗಳನ್ನು ತಯಾರಿಸಿಲಾಗುತ್ತಿದೆ. ಈ ಕಾರ್ಯಕ್ಕೆ 3-4 ದಿನ ಬೇಕಾಗಬಹುದು. ಶೇ.70-80ರಷ್ಟು ಶುದ್ಧ ಬೆಳ್ಳಿ ಸಿಗಬಹುದು..
ಖಜಾನೆ ತುಂಬಿ ಹೋಗಿದ್ದರಿಂದ ಕೊಳ್ಳೇಗಾಲದ ಆಭರಣ ತಯಾರಕರನ್ನು ಕರೆಸಿ ಅನುಪಯುಕ್ತ ಬೆಳ್ಳಿ ಕರಗಿಸಿ 9-10 ಕೆಜಿಯ ಶುದ್ಧ ಬೆಳ್ಳಿ ಗಟ್ಟಿಗಳನ್ನು ತಯಾರಿಸಿಲಾಗುತ್ತಿದೆ. ಈ ಕಾರ್ಯಕ್ಕೆ 3-4 ದಿನ ಬೇಕಾಗಬಹುದು. ಶೇ.70-80ರಷ್ಟು ಶುದ್ಧ ಬೆಳ್ಳಿ ಸಿಗಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ಬೆಳ್ಳಿಗಟ್ಟಿಗಳನ್ನು ಒಟ್ಟುಗೂಡಿಸಿ ಈ ತಿಂಗಳಾಂತ್ಯದಲ್ಲಿ ಬೆಳ್ಳಿರಥ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಜೊತೆಗೆ ಖಜಾನೆಯಲ್ಲಿ ಅಪರೂಪದ ಹಳೆಯ ನಾಣ್ಯಗಳು ಮತ್ತು ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಬಹುದಾದ ಕೆಲವು ವಸ್ತುಗಳು ಸಿಕ್ಕಿದೆ. ಪರಿಣತರ ಸಹಾಯದಿಂದ ಅವುಗಳನ್ನು ಬೇರ್ಪಡಿಸಿ ಕಾಪಾಡಲಾಗುವುದು ಎಂದು ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.