ಚಾಮರಾಜನಗರ: ಮನೆಯಲ್ಲಿ ಟಿವಿ ನೋಡು ಬಾ ಎಂದು ಕರೆದು ಅಪ್ರಾಪ್ತೆ ಮೇಲೆ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ಹನೂರು ತಾಲೂಕಿನ ಗೂಳ್ಯದಬಯಲು ಗ್ರಾಮದಲ್ಲಿ ನಡೆದಿದೆ.
ಟಿವಿ ನೋಡು ಬಾ ಎಂದು ಅಪ್ರಾಪ್ತೆ ಮೇಲೆ ಅತ್ಯಾಚಾರ: ಕಾಮುಕ ಪರಾರಿ - Chamrajnagar rape news
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕಾಮುಕನೋರ್ವ ಪರಾರಿಯಾಗಿರುವ ಘಟನೆ ಹನೂರು ತಾಲೂಕಿನ ಒಡೆಯರಪಾಳ್ಳದ ಗೂಳ್ಯದಬಯಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುಬ್ರಮಣಿ ಎಂಬವರ ಮಗ ಚಾಮುಂಡಿ(25) ಎಂಬಾತ ಅತ್ಯಾಚಾರವೆಸಗಿ ಪರಾರಿಯಾಗಿರುವ ಆರೋಪಿ. ಸಂಬಂಧಿಯೊಬ್ಬರ 15 ವರ್ಷದ ಬಾಲಕಿ ವಸತಿಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೊರೊನಾ ಲಾಕ್ ಡೌನ್ ಹಿನ್ನೆಲೆ ಮನೆಗೆ ಬಂದಿದ್ದ ವೇಳೆ ಟಿವಿ ನೋಡು ಬಾ ಎಂದು ಕರೆದೊಯ್ದು ಕಳೆದ ಮಾರ್ಚ್ ನಲ್ಲಿ ಅತ್ಯಾಚಾರವೆಸಗಿದ್ದ ಎನ್ನಲಾಗ್ತಿದೆ.
ಅತ್ಯಾಚಾರದ ವಿಚಾರವನ್ನು ಮುಚ್ಚಿಟ್ಟಿದ್ದ ಬಾಲಕಿ, ಕಳೆದ ಮಂಗಳವಾರ ಪಾಲಕರಿಗೆ ವಿಷಯ ತಿಳಿಸಿದ್ದಳು. ಸದ್ಯ ಬಾಲಕಿ ಆರೋಗ್ಯವಾಗಿದ್ದಾಳೆ. ಈ ಕುರಿತು ಬಾಲಕಿಯ ತಾಯಿ ಹನೂರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.