ಕೊಳ್ಳೇಗಾಲ: ಮನೆಯಲ್ಲಿ ಒಂಟಿಯಾಗಿದ್ದ 14 ವರ್ಷದ ಬಾಲಕಿಯ ಮೇಲೆ ಸ್ವಂತ ದೊಡ್ಡಪ್ಪನ ಮಗನೇ ಅತ್ಯಾಚಾರ ಎಸಗಿ ಪರಾರಿಯಾಗಿರುವ ಘಟನೆ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ನಡೆದಿದೆ.
ಅಣ್ಣನಿಂದಲೇ ತಂಗಿಯ ಮೇಲೆ ಪೈಶಾಚಿಕ ಕೃತ್ಯ: ಅತ್ಯಾಚಾರಿ ಪರಾರಿ - Rape in Kollegal
ಕೊಳ್ಳೇಗಾಲ ತಾಲೂಕಿನಲ್ಲಿ ತಂಗಿ ಮೇಲೆ ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಪೊಲೀಸರು ಕೃತ್ಯವೆಸಗಿ ಪರಾರಿಯಾದ ಆರೋಪಿಗಾಗಿ ಶೋಧ ನಡೆಸಿದ್ದಾರೆ.
ಪರಾರಿಯಾದ ಅತ್ಯಾಚಾರಿ
ಗ್ರಾಮದ ಶಾಂತರಾಜು ಎಂಬಾತ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ, ಬಾಲಕಿಯ ಆರೋಗ್ಯ ಸಾಮಾನ್ಯವಾಗಿದ್ದು ಪರಾರಿಯಾದ ಅತ್ಯಾಚಾರಿಗೆ ಪೊಲೀಸರು ತಲಾಶ್ ನಡೆಸಿದ್ದಾರೆ.