ಚಾಮರಾಜನಗರ :ಬಾಲಕಿಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ವ್ಯಕ್ತಿ ಸೇರಿದಂತೆ 7 ಮಂದಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ನ್ಯಾಯಾಲಯವು ಆದೇಶ ಹೊರಡಿಸಿದೆ. ಚಾಮರಾಜನಗರದ ಮೀನಜ್ ಖಾನ್, ಸಲ್ಮಾನ್ ಖಾನ್, ಶಾರುಕ್ ಖಾನ್, ವಹಿದ್, ಅಮೀರ್, ಮುಸ್ಕಾಕಿಂ, ಸೈಯದ್ ಉಮರ್ ಶಿಕ್ಷೆಗೊಳಗಾದ ಅಪರಾಧಿಗಳು. 16 ವರ್ಷದ ಬಾಲಕಿಗೆ ಬ್ಲಾಕ್ ಮೇಲ್ ಮಾಡಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಮೀನಜ್ ಖಾನ್ ಹಾಗೂ ಈತನಿಗೆ ಸಹಕರಿಸಿದ ಈತನ ಅಣ್ಣ ಸೇರಿ ಇತರೆ ಅಪರಾಧಿಗಳ ಕೃತ್ಯ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಶಾರಣಿ 10 ವರ್ಷ ಕಠಿಣ ಶಿಕ್ಷೆ ನೀಡಿದ್ದಾರೆ. ಜೊತೆಗೆ, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾದಿಕಾರವು 2 ಲಕ್ಷ ಪರಿಹಾರ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.
ಎಸ್ಪಿ ಬೆನ್ನಲ್ಲೇ ಸಿಇಒ ವರ್ಗಾವಣೆ: ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ವರ್ಗಾವಣೆ ಮಾಡಿ ಅವರ ಸ್ಥಳಕ್ಕೆ ಪದ್ಮಶ್ರೀ ಸಾಹೋ ಅವರನ್ಜು ನೇಮಕ ಮಾಡಿದ ಬೆನ್ನಲ್ಲೇ ಚಾಮರಾಜನಗರ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಕೆ.ಎಂ.ಗಾಯತ್ರಿ ಅವರನ್ನು ಮೈಸೂರು ಜಿಪಂ ಸಿಇಒ ಆಗಿ ವರ್ಗಾಯಿಸಲಾಗಿದ್ದು, ಇವರ ಜಾಗಕ್ಕೆ ಮೈಸೂರಿನ ಆಡಾಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ (ಆಡಳಿತ) ಎಸ್.ಪೂವಿತಾ ಅವರನ್ನು ನೇಮಕ ಮಾಡಲಾಗಿದೆ.