ಕರ್ನಾಟಕ

karnataka

ETV Bharat / state

ಪ್ರೀತಿಯ ನಾಟಕವಾಡಿ ಬಾಲಕಿ ಮೇಲೆ ರೇಪ್: ಚಾಮರಾಜನಗರ ಯುವಕನಿಗೆ 20 ವರ್ಷ ಜೈಲು, ಸಾಥ್ ಕೊಟ್ಟಾಕೆಗೆ 5 ವರ್ಷ ಶಿಕ್ಷೆ - ಅತ್ಯಾಚಾರಿ ಯುವಕನಿಗೆ 20 ವರ್ಷ ಜೈಲು ಶಿಕ್ಷೆ

ಪ್ರೀತಿಯ ನಾಟಕವಾಡಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ನೀಡಿದೆ.

ರೇಪ್ ಕೇಸ್
ರೇಪ್ ಕೇಸ್

By

Published : Sep 14, 2021, 8:42 PM IST

ಚಾಮರಾಜನಗರ:ಪ್ರೀತಿಯ ಹೆಸರಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.

ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ಚಂದ್ರಶೇಖರ್ (21) ಶಿಕ್ಷೆಗೊಳಗಾದ ಅಪರಾಧಿ. 16 ವರ್ಷದ ಶಾಲಾ ಬಾಲಕಿಯನ್ನು ಸತತವಾಗಿ ಹಿಂಬಾಲಿಸಿ, ಲವ್ವೆಂದು ಪುಸಲಾಯಿಸಿ ಅಪಹರಣಗೊಳಿಸಿದ್ದಲ್ಲದೇ ಕೋಡಿಮೋಳೆ ಗ್ರಾಮದ ಮಹಾದೇವಮ್ಮ ಎಂಬವರ ಮನೆಯಲ್ಲಿ ಇರಿಸಿಕೊಂಡಿದ್ದ. 5 ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರ ಮಾಡಿ ದೌರ್ಜನ್ಯ ಎಸಗಿರುವ ಆರೋಪ ದೃಢಪಟ್ಟಿದೆ.

ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನಪುರಿ ಅವರು ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 6.25 ಲಕ್ಷ ರೂ. ದಂಡ ಹಾಗೂ ಅಪರಾಧಿಗೆ ಸಹಕರಿಸಿದ ಮಹಾದೇವಮ್ಮಗೆ 5 ವರ್ಷ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಜೊತೆಗೆ, ಕಾನೂನು ಸೇವಾ ಪ್ರಾಧಿಕಾರವು 7.5 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆದೇಶಿಸಿದ್ದಾರೆ.

ಇನ್ನು, ಈ ಘಟನೆ ಸಂಬಂಧ 2018ರ ಜುಲೈನಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಯೋಗೇಶ್ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ:ಅತ್ಯಾಚಾರ ಕೇಸ್: ಎಲ್​ಜೆಪಿ MP ಪ್ರಿನ್ಸ್ ರಾಜ್​ ವಿರುದ್ಧ FIR, ಚಿರಾಗ್​ ಹೆಸರೂ ಉಲ್ಲೇಖ

ABOUT THE AUTHOR

...view details