ಚಾಮರಾಜನಗರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ತಂದೆಯೇ ಅಪ್ರಾಪ್ತ ಮಲ ಮಗಳ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಗರದ ಗಾಳಿಪುರ ಬಡಾವಣೆಯಲ್ಲಿ ನಡೆದಿದೆ.
ಮಹಮ್ಮದ್ ಮುಸ್ತಫಾ (30) ಅತ್ಯಾಚಾರ ಎಸಗಿದ ಪಾಪಿ ತಂದೆ. ಈತನಿಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಈತ ಇಬ್ಬರು ಮಕ್ಕಳಿರುವ ಮಹಿಳೆಯೊಬ್ಬಳನ್ನು ಎರಡನೇ ಮದುವೆಯಾಗಿ ಪ್ರತ್ಯೇಕ ಸಂಸಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಗಳ ಮೇಲೆಯೇ ಅತ್ಯಾಚಾರವೆಸಗಿದ ಪಾಪಿ ತಂದೆ ಅಂದರ್ ಎರಡನೇ ಹೆಂಡತಿ ಕಳೆದ ಜನವರಿ 31 ರಂದು ಬೆಂಗಳೂರಿಗೆ ತೆರಳಿದ್ದಾಗ, ತನ್ನಿಬ್ಬರು ಮಕ್ಕಳನ್ನು ಗಂಡನ ಮೊದಲನೇ ಹೆಂಡತಿ ಬಳಿ ಬಿಟ್ಟು ತೆರಳಿದ್ದಳು. ಈ ವೇಳೆ 11 ವರ್ಷದ ಪುತ್ರಿಯ ಮೇಲೆ ಮುಸ್ತಫಾ 4-5 ಬಾರಿ ನಿರಂತರ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನಿಂದ ಬಂದ ಬಳಿಕ ವಿಚಾರ ತಿಳಿದ ಎರಡನೇ ಹೆಂಡತಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ. ಸದ್ಯ ಸಿಪಿಐ ನಾಗೇಗೌಡ ಮಾರ್ಗದರ್ಶನದಲ್ಲಿ ಸಿಬ್ಬಂದಿ ಅಹಮ್ಮದ್ ಅವರು ಆರೋಪಿ ಮಹಮ್ಮದ್ ಮುಸ್ತಫಾನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.