ಕರ್ನಾಟಕ

karnataka

ರಂಜಾನ್, ಬಸವ ಜಯಂತಿ ಆಚರಣೆ: ಚಾಮರಾಜನಗರದಲ್ಲಿ ಸಾಮರಸ್ಯ ಸಾರಿದ ಜನರು

By

Published : May 3, 2022, 5:32 PM IST

Updated : May 3, 2022, 5:49 PM IST

ಚಾಮರಾಜನಗರದಲ್ಲಿ ಮುಸ್ಲಿಮರು ರಂಜಾನ್​, ಹಿಂದೂಗಳು ಬಸವೇಶ್ವರ ಜಯಂತಿ ಆಚರಿಸಿದರು. ಆಚರಣೆ ವೇಳೆ ಪರಸ್ಪರರು ಭಾವೈಕ್ಯತೆ ಮೆರೆದಿದ್ದಾರೆ.

ramzan-and-basava-jayanti
ಚಾಮರಾಜನಗರದಲ್ಲಿ ಸಾಮರಸ್ಯ ಸಾರಿದ ಜನರು

ಚಾಮರಾಜನಗರ:ರಂಜಾನ್​ ಹಿನ್ನೆಲೆಯಲ್ಲಿಜಿಲ್ಲೆಯಸೋಮವಾರ ಪೇಟೆ ಹಾಗೂ ರಿಂಗ್ ರಸ್ತೆ, ಗುಂಡ್ಲುಪೇಟೆ, ಹನೂರು, ಯಳಂದೂರಿನ ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮತ್ತೊಂದೆಡೆ ಬಸವೇಶ್ವರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಬಸವೇಶ್ವರರ ಭಾವಚಿತ್ರ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ರಂಜಾನ್, ಬಸವ ಜಯಂತಿ ಆಚರಣೆ: ಚಾಮರಾಜನಗರದಲ್ಲಿ ಸಾಮರಸ್ಯ ಸಾರಿದ ಜನರು

ನಗರದ ಪ್ರವಾಸಿ ಮಂದಿರದಿಂದ ದೊಡ್ಡಂಗಡಿ‌, ಚಿಕ್ಕಂಗಡಿ‌ ಬೀದಿ ಹಾಗೂ‌ ರಾಷ್ಟ್ರೀಯ ಹೆದ್ದಾರಿ‌ ಮೂಲಕ ವಿವಿಧ ಕಲಾತಂಡಗಳು ಹಾಗೂ ವಾದ್ಯಗೋಷ್ಠಿಯೊಂದಿಗೆ ಈ ಮೆರವಣಿಗೆ ನಡೆದು ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು.

ಹಲವೆಡೆ ಭಾವೈಕ್ಯತೆ:ರಂಜಾನ್ ಹಾಗೂ ಬಸವ ಜಯಂತಿ ಎರಡೂ ಒಂದೇ ದಿನ ಬಂದಿರುವುದರಿಂದ ಭಾವೈಕ್ಯತೆ ಸಾರಿದ ಪ್ರಸಂಗಗಳು ನಡೆಯಿತು. ಬಸವೇಶ್ವರರ ಮೆರವಣಿಗೆ ಮಾರ್ಗ ಮಧ್ಯೆ ಮುಸ್ಲಿಮರು ಎದುರಾಗಿ ಇಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು. ಇನ್ನು, ಹರದನಹಳ್ಳಿ ಗ್ರಾಮದಲ್ಲಿ ಪ್ರಾರ್ಥನೆ ಮುಗಿಸಿ ತೆರಳುತ್ತಿದ್ದ ಮುಸ್ಲಿಮರಿಗೆ ಬಸವ ಜಯಂತಿ ಆಚರಿಸಿದವರು ಮಜ್ಜಿಗೆ, ಪಾನಕ ವಿತರಿಸಿದರು.

ಹನೂರು ತಾಲೂಕಿನ‌ ಒಡೆಯರಪಾಳ್ಯ ಗ್ರಾಮದಲ್ಲಿ ಬಸವೇಶ್ವರ ಕಟೌಟ್​ಗೆ ಮುಸ್ಲಿಮರು ಹೂವಿ‌ನ ಹಾರ ಹಾಕಿದರೆ, ಯಳಂದೂರಲ್ಲಿ ಬಳೆಮಂಟಪ ಸಮೀಪ ಅರ್ಚಕರು ಹಾಗೂ ಮುಸ್ಲಿಂ ಮುಖಂಡರು ಶುಭಾಶಯ ವಿನಿಮಯ ಮಾಡಿಕೊಂಡರು.

ಓದಿ:ಪಟ್ಟಾ ಹಕ್ಕಿಗಾಗಿ ಹೋರಾಟ ತೀವ್ರಗೊಳಿಸಿದ ಅರಣ್ಯ ವಾಸಿಗಳು: ಮೇ 7ರಂದು ಹೊನ್ನಾವರದಲ್ಲಿ ಬೃಹತ್ ಸಮಾವೇಶ

Last Updated : May 3, 2022, 5:49 PM IST

ABOUT THE AUTHOR

...view details