ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರ ಕೆಡವಲು ಬಿಜೆಪಿಗೆ ಸಾಥ್ ಕೊಟ್ಟಿದ್ರಾ ಎನ್.ಮಹೇಶ್..? ಜಾರಕಿಹೊಳಿಯಿಂದ ರಿವೀಲ್ - ಕೊಳ್ಳೆಗಾಲ ಶಾಸಕ ಎನ್ ಮಹೇಶ್

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದೆ ಎಂದರೆ ಅದಕ್ಕೆ ನನ್ನಷ್ಟೆ ಎನ್.ಮಹೇಶ್ ಕೂಡ ಕಾರಣ ಎಂದು ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

Ramesh Jarkiholi
ಮೈತ್ರಿ ಸರ್ಕಾರ ಕೆಡವಲು ಬಿಜೆಪಿಗೆ ಸಾಥ್ ಕೊಟ್ಟಿದ್ರಾ ಎನ್.ಮಹೇಶ್...!? ಜಾರಕಿಹೊಳಿಯಿಂದ ರಿವೀಲ್

By

Published : May 29, 2020, 8:45 PM IST

ಕೊಳ್ಳೇಗಾಲ: ಮೈತ್ರಿ ಸರ್ಕಾರದ ಬಹುಮತ ಸಾಬೀತುಪಡಿಸುವ ವೇಳೆ ಗೈರಾಗಿ ಬಿಎಸ್​ಪಿಯಿಂದ ಉಚ್ಛಾಟನೆಗೊಂಡಿದ್ದ ಎನ್.‌ಮಹೇಶ್ ಕೂಡ ಸರ್ಕಾರ ಕೆಡವಲು ಸಾಥ್ ನೀಡಿದ್ದರು ಎಂಬ ಮಾತಿಗೆ ಪುಷ್ಠಿ ಕೊಡುವಂತೆ ಇಂದು ಸಚಿವ ರಮೇಶ್ ಜಾರಕಿಹೊಳಿ ಕೂಡ ಮಾತನಾಡಿದ್ದಾರೆ.

ಹೌದು, ವಿವಿಧ ಕಾಮಗಾರಿ ಪರಿಶೀಲನೆಗಾಗಿ ಕೊಳ್ಳೇಗಾಲಕ್ಕೆ ಆಗಮಿಸಿದ್ದ ಸಚಿವ ರಮೇಶ್ ಜಾರಕಿಹೊಳಿ, ತಮ್ಮ‌ ಭಾಷಣದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ‌ ಬರಲು ನನ್ನಷ್ಟೇ ಎನ್.ಮಹೇಶ್ ಅವರ ಶ್ರಮ ಕೂಡ ಕಾರಣ ಎಂಬ ಅಚ್ಚರಿ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವದಲ್ಲಿ ಇದೆ ಎಂದರೆ ಅದಕ್ಕೆ ನನ್ನಷ್ಟೆ ಎನ್.ಮಹೇಶ್ ಕೂಡ ಕಾರಣ, ಬಿಜೆಪಿ ಸರ್ಕಾರ ಬಂದ ಕೂಡಲೇ ಎನ್.ಮಹೇಶ್ ಅವರನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರನ್ನಾಗಿ ಮಾಡಲು ಮುಂದಾಗಿದ್ದೆವು.‌ ಆದರೆ, ಅವರೇ ಪದವಿಯನ್ನು ತಿರಸ್ಕರಿಸಿ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದರು ಎಂದು ರಿವೀಲ್ ಮಾಡಿದ್ದಾರೆ.

ಒಟ್ಟಿನಲ್ಲಿ ಶಾಸಕ ಎನ್.ಮಹೇಶ್ ಮುಂದಿನ ಚುನಾವಣೆ ಹೊತ್ತಿಗೆ ಕಮಲಕ್ಕೆ ಹಾರುತ್ತಾರೆ ಎಂಬ ಮಾತಿಗೆ ರಮೇಶ್ ಜಾರಕಿಹೊಳಿ ರೆಕ್ಕೆ-ಪುಕ್ಕ ಸೇರಿಸಿದ್ದು ಬಿಜೆಪಿಗೆ ಸೇರುವುದು ಬಹುತೇಕ ನಿಖರವಾಗಿದೆ.

ABOUT THE AUTHOR

...view details