ಕೊಳ್ಳೇಗಾಲ(ಚಾಮರಾಜನಗರ): ಗುಂಡಾಲ್ ಜಲಾಶಯ, ಕೊಂಗಳಕೆರೆ ವೀಕ್ಷಣೆಗೆ ಆಗಮಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನ ಮಾಡಲು ಮುಗಿಬಿದ್ದರು.
ಇದೇ ಮೊದಲ ಭಾರಿಗೆ ಜಿಲ್ಲೆಗೆ ಆಗಮಿಸಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೊಳ್ಳೇಗಾಲದ ಅತಿಥಿ ಗೃಹಕ್ಕೆ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಸುತ್ತುವರೆದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸನ್ಮಾನ ಮಾಡಲು ಮುಗಿಬಿದ್ದರು.
ಪೊಲೀಸ್ ಸಿಬ್ಬಂದಿ ಕಾರ್ಯಕರ್ತರನ್ನು ತಡೆಯಲು ಹರಸಾಹಸಪಡಬೇಕಾಯಿತು. ನಂತರ ಅತಿಥಿ ಗೃಹಕ್ಕೆ ಒಳಗಡೆ ಪ್ರವೇಶ ಮಾಡುತ್ತಿದ್ದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಹೊರತುಪಡಿಸಿ ಉಳಿದವರನ್ನು ಹೊರಗೆ ಇರಿಸಲಾಯಿತು.
ಸಾಮಾಜಿಕ ಅಂತರ ಮರೆತ ಜಲಸಂಪನ್ಮೂಲ ಸಚಿವರು ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವರಾದ ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್ ಕೂಡ ಸಾಮಾಜಿಕ ಅಂತರ ಮರೆತಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ್ ಕೂಡ ಸಾಮಾಜಿಕ ಅಂತರ ಮರೆಯುತ್ತಿದ್ದು, ಕೋವಿಡ್ ಭಯವೇ ಇಲ್ಲದಂತಾಗಿದೆ.