ಕರ್ನಾಟಕ

karnataka

By

Published : May 29, 2020, 2:22 PM IST

ETV Bharat / state

ಹೈಕಮಾಂಡ್ ಯೆಸ್ ಅಂದ್ರೆ ಕಾಂಗ್ರೆಸ್​​​​ನ ಐವರಿಂದ ರಾಜೀನಾಮೆ: ಸಚಿವ ರಮೇಶ್ ಜಾರಕಿಹೊಳಿ

ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾದ ಭಿನ್ನಮತವನ್ನು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಲ್ಲಗಳೆದಿದ್ದು, ಬಿಎಸ್​​ವೈ ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.

ramesh jarakiholi statement
ಸಚಿವ ರಮೇಶ್ ಜಾರಕಿಹೊಳಿ

ಚಾಮರಾಜನಗರ:ಕೊರೊನಾ‌ ಸಂಕಷ್ಟದ ನಡುವೆ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಲ್ಲಗಳೆದಿದ್ದು ಬಿಎಸ್​​ವೈ ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಮನೆಯಲ್ಲಿ ಪೂಜೆಯಿತ್ತು, ಎರಡು ತಿಂಗಳಿನಿಂದ ದೂರವಿದ್ದವರು ಹೋಗಿ ಊಟ ಮಾಡಿದ್ದಾರೆ. ಅವರ ಮನೆಯಲ್ಲಿ ಯಾವುದೇ ಸಭೆ ನಡೆದಿಲ್ಲ. ಇದು ಭಿನ್ನಮತವಲ್ಲ. ಬಿಜೆಪಿ ಸರ್ಕಾರ 100% ಸೇಫ್ ಎಂದರು.

ಸಚಿವ ರಮೇಶ್ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪರೇಷನ್ ಹಸ್ತ ನಡೆಸುತ್ತಿರುವ ಕುರಿತು ಮಾತನಾಡಿ, ಹೈಕಮಾಂಡ್ ಒಪ್ಪಿದರೆ ಕಾಂಗ್ರೆಸ್​​​ನ ಐವರು ಶಾಸಕರಿಂದ ಕೂಡಲೇ ರಾಜೀನಾಮೆ ಕೊಡಿಸುತ್ತೇನೆ. ಇನ್ನೂ ನನ್ನ ಬಳಿ‌ 22 ಅಸಮಾಧಾನ ಹೊಂದಿರುವ ಶಾಸಕರು ಸಂಪರ್ಕ ಹೊಂದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಮತ್ತೆ ಕಾಂಗ್ರೆಸ್​​​ಗೆ ಹೋಗುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಅಲ್ಲಿಗೆ ಹೋಗುತ್ತೇನೆ ಎನ್ನುವವರು ಮೂರ್ಖರು, ನಾನು ಯಡಿಯೂರಪ್ಪನವರ ಪರ. ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲೇ ಎಂದು ಉತ್ತರಿಸಿದರು.

ABOUT THE AUTHOR

...view details