ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆಯಲ್ಲಿ ಜೋರು ಮಳೆ : ಬಿಸಿಲ ಬೇಗೆಗೆ ತಂಪೆರೆದ ವರುಣ - ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ

ಸಂಜೆ ವೇಳೆಗೆ ಗುಡುಗಿನ‌ ಆರ್ಭಟದೊಂದಿಗೆ ಶುರುವಾದ‌ ಜೋರು ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವಡ್ಡಗೆರೆ, ಕುಂದಕೆರೆ, ಚಿರಕನಹಳ್ಳಿ, ಬೊಮ್ಮಲಾಪುರ, ಕೊಡಸೋಗೆ, ಶೀಲವಂತಪುರ, ಕುಂದಕೆರೆ ಗ್ರಾಮಗಳಲ್ಲಿ ಮಳೆಯಾಗಿದೆ..

Rain in Gundlupete
ಗುಂಡ್ಲುಪೇಟೆಯಲ್ಲಿ ಮಳೆ

By

Published : Apr 3, 2021, 10:51 PM IST

ಚಾಮರಾಜನಗರ: ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ವರುಣ‌ ಕೃಪೆತೋರಿದ್ದಾನೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಸಿಂಚನವಾಗಿದೆ.

ಗುಂಡ್ಲುಪೇಟೆಯಲ್ಲಿ ಮಳೆ

ಸಂಜೆ ವೇಳೆಗೆ ಗುಡುಗಿನ‌ ಆರ್ಭಟದೊಂದಿಗೆ ಶುರುವಾದ‌ ಜೋರು ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವಡ್ಡಗೆರೆ, ಕುಂದಕೆರೆ, ಚಿರಕನಹಳ್ಳಿ, ಬೊಮ್ಮಲಾಪುರ, ಕೊಡಸೋಗೆ, ಶೀಲವಂತಪುರ, ಕುಂದಕೆರೆ ಗ್ರಾಮಗಳಲ್ಲಿ ಮಳೆಯಾಗಿದೆ.

ಗುಂಡ್ಲುಪೇಟೆ ಪಟ್ಟಣ ಸೇರಿ ಕೊಳ್ಳೇಗಾಲ, ಚಾಮರಾಜನಗರ ಜಿಲ್ಲಾ ಕೇಂದ್ರಗಳಲ್ಲಿ ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗಿಲ್ಲ. ಮಳೆಯಿಂದ ಕಡಬೂರು ಗ್ರಾಮದಲ್ಲಿ 6ಕ್ಕೂ ಹೆಚ್ಚು ಮನೆಗಳ ಛಾವಣಿಗಳು ಹಾರಿಹೋಗಿವೆ. ‌ನೀರುಗಂಟಿ ಮಹಾದೇವಪ್ಪಗೆ ಸೇರಿದ ಒಂದು ಕರು ಮೃತಪಟ್ಟಿದೆ.

ABOUT THE AUTHOR

...view details