ಕರ್ನಾಟಕ

karnataka

ETV Bharat / state

ಚಾಮರಾಜನಗರ ಜಿಲ್ಲಾದ್ಯಂತ ವರ್ಷಧಾರೆ: ಇನ್ನೂ ಒಂದು ವಾರ ತುಂತುರು ಮಳೆ ಸಾಧ್ಯತೆ - 5 ದಿನಗಳ ಕಾಲ ಮಳೆ

ಚಾಮರಾಜನಗರದಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆಯಾಗಲಿದ್ದು, ಇಂದು ಮಧ್ಯಾಹ್ನದಿಂದಲೇ ಮಳೆ ಜೋರಾಗಿ ಬರಲು ಪ್ರಾರಂಭಿಸಿದೆ.

Chamarajnagar
Chamarajnagar

By

Published : Sep 13, 2020, 4:29 PM IST

ಚಾಮರಾಜನಗರ: ಜಿಲ್ಲಾದ್ಯಂತ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನದ ಹೊತ್ತಿಗೆ ಜೋರು ಮಳೆಯಾಗಿದೆ.

ಚಾಮರಾಜನಗರದಾದ್ಯಂತ ಮಳೆ

ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು ತಾಲೂಕಿನಲ್ಲಿ ಅರ್ಧ ತಾಸು ಜೋರು ಮಳೆಯಾಗಿದ್ದು ಅರಣ್ಯ ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿ ಜೀವಕಳೆ ತುಂಬಿದೆ.

ಇಂದಿನಿಂದ 5 ದಿನಗಳ ಕಾಲ ಜಿಲ್ಲೆಯಲ್ಲಿ 2.5 ಮಿ.ಮೀ ನಿಂದ 7.5 ಮಿ.ಮೀ ಮಳೆಯಾಗಲಿದ್ದು, 14 ರಂದು ಗುಡುಗು ಮಿಂಚಿನೊಂದಿಗೆ ಸಾಧಾರಣ ಮಳೆಯಾಗಲಿದೆ. ಉಳಿದ ದಿನಗಳಲ್ಲಿ ತುಂತುರು ಮಳೆಯಾಗಲಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ರಜತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details