ಚಾಮರಾಜನಗರ: ಕಳೆದ 20-25 ದಿನಗಳಿಂದ ಸುರಿಯುತ್ತಿರುವ ಜೋರು ಮಳೆಗೆ(Rain) ಅನ್ನದಾತ ಕಂಗಾಲಾಗಿದ್ದರೆ, ದುಪ್ಪಟ್ಟು ಬೆಲೆ ತೆತ್ತು ತರಕಾರಿ ಕೊಳ್ಳುವ ಗ್ರಾಹಕರ ಜೇಬು ಸುಟ್ಟುಕೊಳ್ಳುತ್ತಿದ್ದಾನೆ.
ಮೈಸೂರು ಎಪಿಎಂಸಿ ದರಕ್ಕಿಂತ ದುಪ್ಪಟ್ಟು ದರದಲ್ಲಿ ಚಾಮರಾಜನಗರದಲ್ಲಿ ತರಕಾರಿ ಬಿಕರಿಯಾಗುತ್ತಿದೆ. ಬೆಲೆ ಏರಿಕೆಯ(vegetables price hiked) ಲಾಭ ರೈತರಿಗೂ ಸಿಗದ ಪರಿಸ್ಥಿತಿ ನಿರ್ಮಾಣವಾದೆ. ಮದುವೆ ಸಮಾರಂಭಗಳ ಸಮಯದಲ್ಲಿ ಹಣ ಕಾಣಲು ಹಾತೊರೆಯುತ್ತಿದ್ದ ರೈತರಿಗೆ ವರುಣ ದೊಡ್ಡ ಆಘಾತವನ್ನೇ ಕೊಟ್ಟಿದ್ದಾನೆ.
ಈ ಕುರಿತು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಪ್ರಸಾದ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, ನಿರಂತರ ಮಳೆಗೆ ಅಂದಾಜು 49 ಹೆಕ್ಟೇರ್ ಪ್ರದೇಶದ ತರಕಾರಿ ಬೆಳೆ(vegetables) ನಾಶವಾಗಿದೆ.
ಇದರಲ್ಲಿ, ಬಾಳೆ, ಈರುಳ್ಳಿ, ಆಲೂಗಡ್ಡೆ ಮತ್ತು ಟೊಮ್ಯಾಟೊ ಕೂಡ ಸೇರಿವೆ. ಕಳೆದ 25 ದಿನಗಳಿಂದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತರಕಾರಿ ಬೆಳೆಯನ್ನೂ ಯಾರು ಬೆಳೆಯುತ್ತಿಲ್ಲ ಎಂದು ತಿಳಿಸಿದರು.
ತರಕಾರಿ ಬೆಲೆ ಎಷ್ಟಿತ್ತು? ಎಷ್ಟಾಗಿದೆ?:ಟೊಮ್ಯಾಟೊ ನಗರದ ಬೀದಿಬದಿ ವ್ಯಾಪಾರ ಮತ್ತು ಮಾರುಕಟ್ಟೆಯಲ್ಲಿ ಈ ಹಿಂದೆ ಕೆಜಿಗೆ 30 ರೂ. ಇತ್ತು. ಆದರೆ, ಈಗ 90-120 ರೂ.ಆಗಿದ್ದು, ಮೈಸೂರು ಎಪಿಎಂಸಿಯಲ್ಲಿ 75 ರೂ.ದರ ಇದೆ.
ಬೆಂಡೆಕಾಯಿ ಕೆಜಿಗೆ 30 ರೂಪಾಯಿನಿಂದ 50-60 ರೂ., ದಪ್ಪ ಮೆಣಸಿನಕಾಯಿ 40 ಇದ್ದದ್ದು 100 ರೂ., ಕ್ಯಾರೆಟ್ 30 ಇದ್ದದ್ದು 80 ರೂ., ಬೀನ್ಸ್ 40 ಇದ್ದದ್ದು 120 ರೂ., ಕೊತ್ತಂಬರಿ ಸೊಪ್ಪು 10 ಇದ್ದದ್ದು 25 ರೂ., ಈರುಳ್ಳಿ 30 ಇದ್ದದ್ದು 65 ರೂ., ಕೋಸು, ಬಿಳಿ ಬದನೆಕಾಯಿ 20 ಇದ್ದದ್ದು 45 ರೂ. ಆಗಿದೆ.