ಕರ್ನಾಟಕ

karnataka

ಚಾಮರಾಜನಗರ ಕ್ವಾರಿ ಗುಡ್ಡ ಕುಸಿತ ಪ್ರಕರಣ: ಒಂದು ಶವ ಪತ್ತೆ, ಇನ್ನು ಮೂವರು ಸಿಲುಕಿರುವ ಶಂಕೆ

By

Published : Mar 5, 2022, 10:23 AM IST

ಚಾಮರಾಜನಗರ ಕ್ವಾರಿ ಗುಡ್ಡ ಕುಸಿತ ದುರಂತದಲ್ಲಿ ಬಂಡೆ ಕೆಳಗೆ ಸಿಲುಕಿದ್ದ ಒಂದು ಶವ ಪತ್ತೆಯಾಗಿದ್ದು, ಹೊರ ತೆಗೆಯಲಾಗಿದೆ.

ಚಾಮರಾಜನಗರ ಕ್ವಾರಿ ಗುಡ್ಡ ಕುಸಿತ ಪ್ರಕರಣ
ಚಾಮರಾಜನಗರ ಕ್ವಾರಿ ಗುಡ್ಡ ಕುಸಿತ ಪ್ರಕರಣ

ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿತ ದುರಂತದಲ್ಲಿ ಎನ್​ಡಿಆರ್​ಎಫ್, ಎಸ್​ಟಿಆರ್​ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ.

ಕಲ್ಲಿನ ಬಂಡೆ ಕೆಳಗೆ ಸಿಲುಕಿದ್ದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಇನ್ನು ಉತ್ತರಪ್ರದೇಶ ಮೂಲದ ಹಿಟಾಚಿ ಆಪರೇಟರ್​ಗಳಾದ ಫರಾಜ್, ಅಜ್ಮುಲ್ಲಾ, ಮಿರಾಜ್ ಬಂಡೆಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಇನ್ನು, 25 ಮಂದಿ ಎನ್‌ಡಿಆರ್‌ಎಫ್, 25 ಮಂದಿ ಎಸ್‌ಟಿ‌ಆರ್‌ಎಫ್, 50 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಲ್ಲುಗಳನ್ನು ಸರಿಸಲು ಹರಸಾಹಸ ಪಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ‌.ಸೋಮಣ್ಣ ಭೇಟಿ ನೀಡಲಿದ್ದಾರೆ, ಬಳಿಕ ಮಧ್ಯಾಹ್ನ 1 ಕ್ಕೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಲಿದ್ದಾರೆ.

(ಇದನ್ನೂ ಓದಿ: Video: ಗುಂಡ್ಲುಪೇಟೆಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತ: ಐವರ ರಕ್ಷಣೆ, ಮಣ್ಣಿನಡಿ ಸಿಲುಕಿರುವುದೇ ಅನುಮಾನ ಎಂದ ಡಿಸಿ)

ABOUT THE AUTHOR

...view details