ಚಾಮರಾಜನಗರ: ಕಬ್ಬು ಕಟಾವು ಮಾಡುತ್ತಿದ್ದ ಕೂಲಿ ಕಾರ್ಮಿಕರು ಭಾರಿ ಗಾತ್ರದ ಹೆಬ್ಬಾವು ಮಲಗಿದ್ದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದ ಘಟನೆ ಯಳಂದೂರು ತಾಲೂಕಿನ ಮುರುಟಿಪಾಳ್ಯ ಗ್ರಾಮದಲ್ಲಿ ನಡೆದಿದೆ.
ಕಬ್ಬಿನ ಗದ್ದೆಯಲ್ಲಿ ಕಾಡುಬೆಕ್ಕು ನುಂಗಿದ ಹೆಬ್ಬಾವು: ಕಾರ್ಮಿಕರು ಕಕ್ಕಾಬಿಕ್ಕಿ - ಕಾಡುಬೆಕ್ಕು ನುಂಗಿದ ಹೆಬ್ಬಾವು
ಕಾಡುಬೆಕ್ಕು ನುಂಗಿ ಮುಂದಕ್ಕೆ ತೆವಳಲಾಗದೇ ಮಲಗಿದ್ದ ಹೆಬ್ಬಾವನ್ನು ಉರಗ ತಜ್ಞ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ ರಕ್ಷಿಸಿ ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಬಿಟ್ಟು ಬಂದಿದ್ದಾರೆ.
ಹೆಬ್ಬಾವು
ಗ್ರಾಮದ ಶ್ರೀನಿವಾಸ್ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವಾಗ ಫಸಲಿನ ಮಧ್ಯೆ ಮುಂದಕ್ಕೆ ಚಲಿಸಲಾಗದ ಸ್ಥಿತಿಯಲ್ಲಿ ಮಲಗಿದ್ದ ಹೆಬ್ಬಾವು ನೋಡಿದ್ದಾರೆ. ತಕ್ಷಣ ಉರಗ ತಜ್ಞ ಸಂತೇಮರಹಳ್ಳಿಯ ಸ್ನೇಕ್ ಮಹೇಶ್ಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಮಹೇಶ್, ಹೆಬ್ಬಾವು ರಕ್ಷಿಸಿ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಬಿಟ್ಟು ಬಂದಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸ್ನೇಕ್ ಮಹೇಶ್, ಕಾಡುಬೆಕ್ಕು ನುಂಗಿ ಹೆಬ್ಬಾವು ಮುಂದಕ್ಕೆ ತೆವಳಲಾಗದೇ ಮಲಗಿತ್ತು. ಬೆಕ್ಕನ್ನು ಹೊರಹಾಕಿದ ಬಳಿಕ, ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದೇನೆ ಎಂದರು.