ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲೂ ನಡೆದಿತ್ತು ಅಪ್ಪು 'ಗಂಧದಗುಡಿ' ಶೂಟಿಂಗ್: ಕಳ್ಳಬೇಟೆ ಶಿಬಿರಗಳು ಸೆರೆ - ಪುನೀತ್​ ಕನಸಿನ ಗಂಧದಗುಡಿ ಸಾಕ್ಷ್ಯಚಿತ್ರ ಬಿಡುಗಡೆ

ಬಹುನಿರೀಕ್ಷಿತ ನಟ ಪುನೀತ್ ರಾಜಕುಮಾರ್ ಕನಸಿನ ಗಂಧದಗುಡಿ ವೈಲ್ಡ್ ಡಾಕ್ಯುಮೆಂಟರಿ ಟೀಸರ್​​ ಇಂದು ಬಿಡುಗಡೆಗೊಂಡಿದ್ದು, ಈ ಸಾಕ್ಷ್ಯಚಿತ್ರದ ಶೂಟಿಂಗ್ ಚಾಮರಾಜನಗರದಲ್ಲೂ ನಡೆದಿದೆ.

Gandhadagudi shooting took place in Chamarajanagar
ಚಾಮರಾಜನಗರದಲ್ಲೂ ನಡೆದಿದೆ ಗಂಧದಗುಡಿ ಶೂಟಿಂಗ್

By

Published : Dec 6, 2021, 4:10 PM IST

ಚಾಮರಾಜನಗರ:ಪುನೀತ್​ ರಾಜ್​ ಕುಮಾರ್​​​ ಕನಸಿನ ಗಂಧದಗುಡಿ ಸಾಕ್ಷ್ಯಚಿತ್ರದ ಶೂಟಿಂಗ್ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲೂ ನಡೆದಿದ್ದು, ಇಲ್ಲಿನ ಸಿಬ್ಬಂದಿ ಕೆಲಸಗಳನ್ನು ಸೆರೆ ಹಿಡಿದಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಪುನೀತ್ ರಾಜಕುಮಾರ್ ಅಭಿನಯದ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಿಸಿರುವ ಗಂಧದ ಗುಡಿ ಡಾಕ್ಯುಮೆಂಟರಿ ಟೈಟಲ್​​​ ಟೀಸರ್ ಇಂದು ಬಿಡುಗಡೆಯಾಗಿದೆ. ಇದರಲ್ಲಿ ನಮ್ಮ ರಾಜ್ಯದ ಅರಣ್ಯಗಳ ಪ್ರಾಕೃತಿಕ ಸೌಂದರ್ಯ ತಾಣಗಳನ್ನು ಚಿತ್ರಿಸಲಾಗಿದೆ. ಅದರಲ್ಲಿ ಬಿಆರ್​ಟಿ ಕೆ ಗುಡಿ, ಬೂದಿಪಡಗ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಿದ್ದಾರೆ.

ಪುನೀತ್ ಬಂದು ಶೂಟಿಂಗ್ ಮಾಡುವ ತನಕ ಅಧಿಕಾರಿಗಳಿಗೆ ಅಪ್ಪು ಬರುತ್ತಾರೆ ಎಂದು ಗೊತ್ತಿರಲಿಲ್ಲವಂತೆ. ಕಾಡಿನ ಕಳ್ಳಬೇಟೆ ಶಿಬಿರದಲ್ಲಿ ಸಿಬ್ಬಂದಿ ಹೇಗೆ ಇರ್ತಾರೆ, ಏನ್ ಮಾಡ್ತಾರೆ, ಅವರಿಗೆ ಊಟದ ವ್ಯವಸ್ಥೆ ಹೇಗೆ ಎಂಬುದನ್ನು ಚಿತ್ರೀಕರಿಸಿದ್ದಾರೆ. ಇಡೀ ಬಿಆರ್​ಟಿಯ ಸೊಬಗು ರಾಜ್ಯದಲ್ಲಿ ಮತ್ತಷ್ಟು ಪಸರಿಸಲು ಗಂಧದಗುಡಿ ಕಾರಣವಾಗಲಿದೆ ಎಂಬುದು ಅರಣ್ಯ ಇಲಾಖೆ ಅಭಿಪ್ರಾಯವಾಗಿದೆ.

ಈ ಹಿಂದೆ ಗಡಿ ಜಿಲ್ಲೆಯ ಪ್ರವಾಸೋದ್ಯಮವನ್ನು ಸೆಳೆಯುವ ದೃಷ್ಟಿಯಿಂದ ಜಿಲ್ಲಾಡಳಿತ ಹೊರ ತಂದಿದ್ದ ಚಾಮರಾಜನಗರ-ಹುಲಿಗಳ‌ ನಾಡು ಎಂಬ ಪ್ರಮೋಷನಲ್ ವಿಡಿಯೋವನ್ನು ಅಪ್ಪು ಬಿಡುಗಡೆ ಮಾಡಿ ಜಿಲ್ಲೆಗೆ ಆಗಮಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ಅಪ್ಪು'ಗಂಧದಗುಡಿ'ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ..

ABOUT THE AUTHOR

...view details