ಕರ್ನಾಟಕ

karnataka

ETV Bharat / state

ನಿರಂತರ ಮಳೆಯಲ್ಲೂ 'ಅಪ್ಪು' ಪುಣ್ಯಸ್ಮರಣೆ: ಪುಷ್ಮಾಪುರದಲ್ಲಿ ಗ್ರಾಮಸ್ಥರಿಗೆಲ್ಲ ಬಾಡೂಟ

ನಿರಂತರ ಮಳೆಯ ನಡುವೆಯೂ ಚಾಮರಾಜನಗರದ(Chamarajanagar) ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಪುಷ್ಮಾಪುರದಲ್ಲಿ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು.

anna santarpana programa in Chamarajanagar
ಪುಷ್ಮಾಪುರದಲ್ಲಿ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ

By

Published : Nov 22, 2021, 9:55 AM IST

ಚಾಮರಾಜನಗರ:ಕನ್ನಡದ ಹೆಸರಾಂತ ನಟ ಪವರ್​​ ಸ್ಟಾರ್​​ ಪುನೀತ್ ರಾಜ್​ಕುಮಾರ್​​(puneeth rajkumar) ಅಗಲಿಕೆಯ ನೋವನ್ನು ಇನ್ನು ಜನರು ಮರೆಯುತ್ತಿಲ್ಲ. ದಿನ ಕಳೆದಂತೆ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ. ಅದರಂತೆ ನೆಚ್ಚಿನ ನಟನಿಗೆ ಗೌರವ ಸಲ್ಲಿಸಿ ಬಾಡೂಟ ವಿತರಿಸಿದ ಘಟನೆ ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಪುಷ್ಮಾಪುರದಲ್ಲಿ ನಡೆದಿದೆ.

ಪುಷ್ಮಾಪುರದಲ್ಲಿ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮ

ಗ್ರಾಮದ 20ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ಸೇರಿಕೊಂಡು ನೂರಾರು ಕೆ.ಜಿ ಕೋಳಿ ಮಾಂಸದಲ್ಲಿ 450 ಜನಕ್ಕೆ ಆಗುವಷ್ಟು ಚಿಕನ್ ಬಿರಿಯಾನಿ ತಯಾರಿಸಿ ಗ್ರಾಮಸ್ಥರಿಗೆ ವಿತರಿಸಿದ್ದಾರೆ. ನಿರಂತರ ಮಳೆಯನ್ನು ಲೆಕ್ಕಿಸದ ಜನರು ಅಪ್ಪು ಪುಣ್ಯ ಸ್ಮರಣೆ ನಡೆಸಿ ಅಭಿಮಾನ ಮೆರೆದಿದ್ದಾರೆ.

ಈ ಕುರಿತು ಗ್ರಾಮಸ್ಥ ಶೇಖರ್ ಮಾಹಿತಿ ನೀಡಿದ್ದು, ನಮ್ಮೂರಿನಲ್ಲಿ ಪುನೀತ್ ಅಭಿಮಾನಿಗಳೇ ಅಧಿಕ. ಪುನೀತ್ ಚಿತ್ರ ಬಿಡುಗಡೆಯಾದರೆ, ಕುಟುಂಬಸ್ಥರೆಲ್ಲ ಸಿನಿಮಾ ನೋಡಲು ಹೋಗುತ್ತಿದ್ದರು. ಅವರ ಅಗಲಿಕೆ ನೋವನ್ನು ಇನ್ನು ನಮ್ಮೂರಿನ ಜನರು ಮರೆಯುತ್ತಿಲ್ಲ. ಪುಣ್ಯಸ್ಮರಣೆ ಮಾಡಿ ಅವರು ಇಷ್ಟ ಪಡುತ್ತಿದ್ದ ಬಿರಿಯಾನಿಯನ್ನು ಹಂಚಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ವಿಧಾನ ಪರಿಷತ್ ‌ಚುನಾವಣೆ ಬಳಿಕ ರಾಜ್ಯ ಪ್ರವಾಸ : ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಘೋಷಣೆ

ABOUT THE AUTHOR

...view details