ಕರ್ನಾಟಕ

karnataka

ETV Bharat / state

ಪುನೀತ್​ ಸಾವಿನಿಂದ ಬೇಸರ.. ವಾರದಿಂದ ಆಹಾರ ತ್ಯಜಿಸಿದ್ದ ಕೊಳ್ಳೇಗಾಲದ ಅಪ್ಪು ಅಭಿಮಾನಿ ಸಾವು - Chamarajanagar

ನಟ ಪುನೀತ್ ರಾಜ್​ಕುಮಾರ್ ಸಾವನ್ನು ಅರಗಿಸಿಕೊಳ್ಳಲಾಗದ ಕೊಳ್ಳೇಗಾಲದ ಅಭಿಮಾನಿಯೊಬ್ಬ ವಾರದಿಂದ ಊಟ ತ್ಯಜಿಸಿ ಇಂದು ಮೃತಪಟ್ಟಿದ್ದಾನೆ.

chamarajanagar
ಪುನೀತ್ ಹಾಗು ಶಿವಮೂರ್ತಿ

By

Published : Nov 5, 2021, 9:36 AM IST

ಚಾಮರಾಜನಗರ:ನಟ ಪುನೀತ್ ರಾಜ್‍ಕುಮಾರ್ ಸಾವನ್ನು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾಗುತ್ತಿದ್ದಾರೆ. ಸದ್ಯ ಕೊಳ್ಳೇಗಾಲದಲ್ಲಿ ಓರ್ವ ಅಭಿಮಾನಿ ಆಹಾರ ತ್ಯಜಿಸಿ ಮೃತಪಟ್ಟಿರುವ ಘಟನೆ ನಡೆದಿದೆ.

ಪುನೀತ್ ಹಾಗು ಶಿವಮೂರ್ತಿ

ಕೊಳ್ಳೇಗಾಲದ ಭೀಮನಗರ ನಿವಾಸಿ ಶಿವಮೂರ್ತಿ (31) ಮೃತ ಅಭಿಮಾನಿ. ಈತ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಶಿವಮೂರ್ತಿ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದರು. ಪುನೀತ್ ರೀತಿ ಡ್ಯಾನ್ಸ್, ಸ್ಟೈಲ್, ವಿನಯ ತೋರುತ್ತಿದ್ದ ಇವರು ಪವರ್​ಸ್ಟಾರ್​ ಸಾವಿನ ಬಳಿಕ ಆಹಾರ ತ್ಯಜಿಸಿದ್ದರು.

ಊಟ ತ್ಯಜಿಸಿ ಪುನೀತ್​​ ಅಭಿಮಾನಿ ಸಾವು

ಕಳೆದ ಒಂದು ವಾರದಿಂದ ಆಹಾರ ಸೇವಿಸದ ಇವರು ಎದೆನೋವೆಂದು ಗುರುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಊಟ ತ್ಯಜಿಸಿ ಪುನೀತ್​​ ಅಭಿಮಾನಿ ಸಾವು

ಇದನ್ನೂ ಓದಿ:ಹೈದರಾಬಾದ್​ನಲ್ಲಿ ಪಟಾಕಿ ಸ್ಫೋಟ: ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ

ABOUT THE AUTHOR

...view details