ಕರ್ನಾಟಕ

karnataka

By

Published : Apr 3, 2020, 6:37 PM IST

ETV Bharat / state

ಪುಣಜನೂರು ಚೆಕ್ ಪೋಸ್ಟ್ ಡಮ್ಮಿ.. ಹೊರರಾಜ್ಯದವರನ್ನು ಹೀಗೆಲ್ಲಾ ಬಿಡಬಹುದಾ ಸ್ವಾಮಿ!?

ಚೆಕ್‌ಪೋಸ್ಟ್​​ನಲ್ಲಿ ಸ್ಕ್ರೀನಿಂಗ್ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಬಳಿ ಕನಿಷ್ಠ ದೇಹದ ಉಷ್ಣಾಂಶ ಕಂಡು‌ ಹಿಡಿಯುವ ಥರ್ಮೋಮೀಟರ್‌ ಕೂಡ ಇಲ್ಲ. ನಿಮಗೆ ಜ್ಬರ ಬಂದಿದೆಯಾ, ಕೆಮ್ಮು-ಶೀತ ಇದೆಯಾ ಎಂದು ಕೇಳಿ ಬಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪುಣಜನೂರು ಚೆಕ್ ಪೋಸ್ಟ್  ಡಮ್ಮಿ
ಪುಣಜನೂರು ಚೆಕ್ ಪೋಸ್ಟ್ ಡಮ್ಮಿ

ಚಾಮರಾಜನಗರ :ಜಿಲ್ಲೆ ಕೊರೊನಾ ಮುಕ್ತವಾಗಿದೆ. ಇತ್ತ ನಂಜನಗೂಡು ಹಾಗೂ ತಮಿಳುನಾಡು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಚೆಕ್‌ಪೋಸ್ಟ್ ಸಿಬ್ಬಂದಿಗೆ ಯಾವುದೇ ಸಾಧನಗಳನ್ನು ಕೊಡದೇ, ಜನರನ್ನು ಹಾಗೇ ಬಿಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚೆಕ್‌ಪೋಸ್ಟ್​​ನಲ್ಲಿ ಸ್ಕ್ರೀನಿಂಗ್ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಬಳಿ ಕನಿಷ್ಠ ದೇಹದ ಉಷ್ಣಾಂಶ ಕಂಡು‌ ಹಿಡಿಯುವ ಥರ್ಮೋಮೀಟರ್‌ ಕೂಡ ಇಲ್ಲ. ನಿಮಗೆ ಜ್ಬರ ಬಂದಿದೆಯಾ, ಕೆಮ್ಮು-ಶೀತ ಇದೆಯಾ ಎಂದು ಕೇಳಿ ಬಿಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸ್ಕ್ರೀನಿಂಗ್ ಕಥೆ ಒಂದೆಡೆಯಾದರೇ, ಊಟ ಮತ್ತು ಕುಡಿಯುವ ನೀರಿಗೆ ಸಿಬ್ಬಂದಿ ಪರದಾಡುವ ಸ್ಥಿತಿ ಇದೆ. ಕೆಮ್ಮಿದೆಯಾ, ಜ್ವರವಿದೆಯಾ ಎಂದು ಪಾಸ್ ಕೊಡುವಾಗಲೂ ಮತ್ತು ನಮ್ಮ ಗಡಿಯೊಳಕ್ಕೆ ಬರುವಾಗಲೂ ಕೇವಲ ಬಾಯಿಮಾತಲ್ಲಷ್ಟೇ ಕೇಳಲಾಗುತ್ತಿದೆ ಎಂದು ಹೆಸರೇಳದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅಗತ್ಯ ಸಾಧನ, ವಸ್ತುಗಳನ್ನು ಪೂರೈಸಲು ಮುಂದಾಗಬೇಕಿದೆ.

ABOUT THE AUTHOR

...view details