ಚಾಮರಾಜನಗರ: ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ದ್ವಿತೀಯ ಪಿಯುಸಿ ಅಂತಿಮ ವಿಷಯ ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳು ಯುವಕನೊಟ್ಟಿಗೆ ಪರಾರಿಯಾದ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪರೀಕ್ಷೆಯ ಕೊನೆಯ ದಿನವೇ ವಿದ್ಯಾರ್ಥಿನಿಯು ಲವರ್ ಜೊತೆ ಓಡಿ ಹೋಗಿರುವುದು ಪೂರ್ವನಿಯೋಜಿತ ಪ್ಲಾನ್ನಂತೆ ಕಂಡುಬರುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕೊಳ್ಳೇಗಾಲ ತಾಲೂಕಿನ ಹೊಸ ಹಂಪಾಪುರ ಗ್ರಾಮದ ವಿದ್ಯಾರ್ಥಿನಿ ನಾಪತ್ತೆಯಾದವಳು. ಈಕೆ ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಅಂತಿಮ ವಿಷಯ ಪರೀಕ್ಷೆ ಬರೆದ ಬಳಿಕ ಜೊತೆಯಲ್ಲಿದ್ದ ತಾಯಿಯ ಕಣ್ತಪ್ಪಿಸಿ ಅದೇ ಗ್ರಾಮದ ಯುವಕನೊಟ್ಟಿಗೆ ಪರಾರಿಯಾಗಿದ್ದಾಳೆ.