ಕರ್ನಾಟಕ

karnataka

ETV Bharat / state

ಚಾಮರಾಜನಗರ: 268 ವಿದ್ಯಾರ್ಥಿಗಳು ಗೈರು, ನಿರಾಂತಕದಿಂದ ಮುಗಿದ ಪಿಯು ಪರೀಕ್ಷೆ..! - ಚಾಮರಾಜನಗರ ಪಿಯುಸಿ ಪರೀಕ್ಷೆ

ಚಾಮರಾಜನಗರ ಜಿಲ್ಲೆಯಲ್ಲಿ ಇಂದು ಒಟ್ಟು 16 ಪರೀಕ್ಷಾ ಕೇಂದ್ರಗಳಲ್ಲಿ ಪಿಯು ಪರೀಕ್ಷೆ ನಡೆದಿದೆ.

PU exam
PU exam

By

Published : Jun 18, 2020, 6:53 PM IST

ಚಾಮರಾಜನಗರ:ಲಾಕ್​ಡೌನ್​ ಬಳಿಕ ನಡೆದ ಇಂದಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು 268 ವಿದ್ಯಾರ್ಥಿಗಳು ಗೈರಾಗಿದ್ದು, ಉಳಿದಂತೆ ಪರೀಕ್ಷೆ ನಿರಾಂತಕವಾಗಿ ನಡೆದಿದೆ.

ಜಿಲ್ಲಾಡಳಿತ ಹಾಗೂ ಪಿಯು ಶಿಕ್ಷಣ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಯಳಂದೂರು, ಹನೂರು ಸೇರಿದಂತೆ ಒಟ್ಟು 16 ಪರೀಕ್ಷಾ ಕೇಂದ್ರಗಳಲ್ಲಿ 6,540 ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಲು ಸಜ್ಜಾಗಿದ್ದರು‌‌. ಇವರಲ್ಲಿ 268 ವಿದ್ಯಾರ್ಥಿಗಳು ಗೈರಾಗಿದ್ದು ನಕಲು ಮಾಡಿ ಸಿಕ್ಕಿಬಿದ್ದಿರುವ ಘಟನೆಯೂ ನಡೆದಿದೆ.

ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿಗಳನ್ನು ರೂಪಿಸಲಾಗಿತ್ತು. ನಗರದ ಓರ್ವ ವಿದ್ಯಾರ್ಥಿನಿ ನೆಗಡಿಯಿಂದ ಬಳಲುತ್ತಿದ್ದರಿಂದ ಪ್ರತ್ಯೇಕವಾಗಿ ಪರೀಕ್ಷೆ ಬರೆಸಿದ ಘಟನೆ ನಡೆಯಿತು.

ಒಟ್ಟಿನಲ್ಲಿ, ಮಾಸ್ಕ್ ಧರಿಸಿ ಸಾಮಾಜಿಕ ಅಂತರದ ನಡುವೆ ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಪಿಯು ಪರೀಕ್ಷೆ ಮುಗಿದಿದ್ದು, ವಿದ್ಯಾರ್ಥಿಗಳು ಕೊಂಚ ನಿರಾಳರಾಗಿದ್ದಾರೆ.

ABOUT THE AUTHOR

...view details