ಕರ್ನಾಟಕ

karnataka

ETV Bharat / state

ಇಂದಿನಿಂದ ಪಿಯು ಪರೀಕ್ಷೆ: ಸಿಸಿಟಿವಿ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು - ದ್ವಿತೀಯ ಪಿಯು ಪರೀಕ್ಷೆ

ದ್ವಿತೀಯ ಪಿಯು ಪರೀಕ್ಷೆ ಆರಂಭವಾದ ಹಿನ್ನೆಲೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

PUC exam start from today
ಇಂದಿನಿಂದ ಪಿಯು ಪರೀಕ್ಷೆ

By

Published : Mar 4, 2020, 11:30 AM IST

ಚಾಮರಾಜನಗರ: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾದ ಹಿನ್ನೆಲೆ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಜಿಲ್ಲೆಯ 16 ಕೇಂದ್ರಗಳಲ್ಲಿ 5,787 ಹೊಸ ವಿದ್ಯಾರ್ಥಿಗಳು, 850 ಪುನರಾವರ್ತಿತ ಹಾಗೂ 257 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6,894 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇಂದಿನಿಂದ ಪಿಯು ಪರೀಕ್ಷೆ

ಕಲಾ ವಿಭಾಗದಲ್ಲಿ 2,750, ವಾಣಿಜ್ಯ ವಿಭಾಗದಲ್ಲಿ 2,606 ಹಾಗೂ ವಿಜ್ಞಾನ ವಿಭಾಗದಲ್ಲಿ 1,538 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವರು. ಪಾರದರ್ಶಕ ಪರೀಕ್ಷೆ ನಡೆಯುವ ಉದ್ದೇಶದಿಂದ ಪರೀಕ್ಷಾ ದಿನಗಳಂದು ಕೇಂದ್ರಗಳ 200 ಮೀ. ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಿದ್ದು, 200 ಮೀ ಸುತ್ತಲಿರುವ ಜೆರಾಕ್ಸ್, ಸೈಬರ್ ಸೆಂಟರ್ ಬಂದ್ ಆಗಲಿದೆ.

ABOUT THE AUTHOR

...view details