ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದ ಕುರಿತು ನಗರದ ವಕೀಲರಾದ ಕೆ.ಎಂ. ಶ್ರೀನಿವಾಸಮೂರ್ತಿ ಎಂಬುವರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅದು ಅಡ್ಮಿಟ್ ಕೂಡ ಆಗಿದೆ.
ಆಕ್ಸಿಜನ್ ದುರಂತ ಕುರಿತು ಪಿಐಎಲ್; ನಾಳೆ ವಿಚಾರಣೆ - ಚಾಮರಾಜನಗರ ಆಮ್ಲಜನಕ ಕೊರತೆಯಿಂದ ಸಾವು ಪ್ರಕರಣ
ಅರ್ಜಿಯಲ್ಲಿ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ಕೊಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಕೊಡಬೇಕೆಂದು ವಕೀಲ ಶ್ರೀನಿವಾಸಮೂರ್ತಿ ಕೋರಿದ್ದಾರೆ.
ಆಕ್ಸಿಜನ್ ದುರಂತ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು
ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಚಾಮರಾಜನಗರ ಡಿಸಿ ಮತ್ತು ಚಾಮರಾಜನಗರ ಡಿಎಚ್ಒ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದು ಗುರುವಾರ ಮೊದಲ ಪ್ರಕರಣವಾಗಿ ಅರ್ಜಿ ವಿಚಾರಣೆಯನ್ನು ದ್ವಿಸದಸ್ಯ ಪೀಠವು ನಡೆಸಲಿದೆ.
ಇನ್ನು, ತಮ್ಮ ಅರ್ಜಿಯಲ್ಲಿ ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ ಕೊಡಬೇಕು, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಜೊತೆಗೆ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಕೊಡಬೇಕೆಂದು ವಕೀಲ ಶ್ರೀನಿವಾಸಮೂರ್ತಿ ಕೋರಿದ್ದಾರೆ.