ಚಾಮರಾಜನಗರ: ಪೆಟ್ರೋಲ್ ಬೆಲೆ 100 ರೂ. ಆಸುಪಾಸಿನಲ್ಲಿರುವುದರಿಂದ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಗಗನಮುಖಿ ಆಗುತ್ತಿರುವುದನ್ನು ಖಂಡಿಸಿ ಎಸ್ಡಿಪಿಐ ಕಾರ್ಯಕರ್ತರು ನಗರದಲ್ಲಿ ವಿನೂತನವಾಗಿ ಪ್ರತಿಭಟಿಸಿದರು.
ಪೆಟ್ರೋಲ್ ಬೆಲೆ ಏರಿಕೆ ಖಂಡನೆ ಓದಿ: ತೆರವಾಗಿದ್ದ ಪರಿಷತ್ ಸದಸ್ಯ ಧರ್ಮೇಗೌಡರ ಸ್ಥಾನಕ್ಕೆ ಉಪ ಚುನಾವಣೆ ದಿನಾಂಕ ಫಿಕ್ಸ್
ಗುಂಡ್ಲುಪೇಟೆ ವೃತ್ತದಿಂದ ಭುವನೇಶ್ವರಿ ವೃತ್ತದವರೆಗೆ ತಳ್ಳುವ ಗಾಡಿಯಲ್ಲಿ ಬೈಕ್, ಖಾಲಿ ಸಿಲಿಂಡರ್ಗಳನ್ನು ಇಟ್ಟುಕೊಂಡು ಮೆರವಣಿಗೆ ಮಾಡಿದರು. ಬೆಲೆ ಏರಿಕೆಯಿಂದ ವಾಹನ ಚಲಾಯಿಸದಂತಾಗಿದೆ, ಬೆಲೆ ಏರಿಕೆ ಬಡವರ ಜೀವನವನ್ನು ದುಸ್ತರವಾಗಿಸಿದೆ ಎಂದು ಆರೋಪಿಸಿದರು. ಕ್ರಿಕೆಟ್ ಬ್ಯಾಟ್, ಹೆಲ್ಮೆಟ್ ಹಿಡಿದು ಪೆಟ್ರೋಲ್ ದರ ಸೆಂಚುರಿ ಬಾರಿಸಿದ ಕುರಿತು ಅಣಕು ಮಾಡಿದರು.
ದರ ಏರಿಕೆ ವಿರುದ್ಧ ಮಾತನಾಡುತ್ತ ಅಧಿಕಾರ ಹಿಡಿದ ಮೋದಿ ಸರ್ಕಾರ, ಈಗ ಕಣ್ಮುಚ್ಚಿ ಕುಳಿತಿದೆ. ಈ ಪರಿ ಬೆಲೆ ಏರಿಕೆ ಉಂಟಾದರೆ ಜೀವನ ನಡೆಸಲು ಅಸಾಧ್ಯ. ಕೂಡಲೇ, ಇಂಧನ ಹಾಗೂ ಅಡುಗೆ ಅನಿಲದ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.