ಚಾಮರಾಜನಗರ: ಜೀಪಿನಿಂದ ಹಾರಿ ಆರೋಪಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಐವರು ಪೊಲೀಸರು ಅಮಾನತುಗೊಂಡಿದ್ದಾರೆ. ಯಳಂದೂರು ಸಿಪಿಐ ಶಿವಮಾದಯ್ಯ, ಪಿಎಸ್ಐ ಮಹದೇವಗೌಡ, ಎಎಸ್ಐ ಚೆಲುವರಾಜ್, ಹೆಡ್ ಕಾನ್ಸ್‌ಟೇಬಲ್ ಭದ್ರಮ್ಮ, ಕಾನ್ಸ್‌ಟೇಬಲ್ ಸೋಮಶೇಖರ್ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಆರೋಪಿ ಬಂಧಿಸಿ ಕರೆತರುವಾಗ ಕರ್ತವ್ಯಲೋಪ ಎಸಗಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಈ ಅಮಾನತು ಆದೇಶ ಹೊರಬಿದ್ದಿದೆ.
ಲೋಪ ಆರೋಪ ಐವರು ಪೊಲೀಸರ ಅಮಾನತು: ಆದೇಶ ಹಿಂಪಡೆಯುವಂತೆ ಹೋರಾಟ - ETV Bharath Kannada
ಕರ್ತವ್ಯ ಲೋಪದಡಿ ಐವರನ್ನು ಅಮಾನತು ಮಾಡಿ ಹೊರಡಿಸಿರುವ ಆದೇಶ ಹಿಂಪಡೆಯ ಬೇಕು ಎಂದು ದಲಿತ ಸಂಘಟನೆಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದವು.

ಆದೇಶ ಹಿಂಪಡೆಯುವಂತೆ ಹೋರಾಟ
ಯಳಂದೂರು ತಾಲೂಕಿನ ಕುಂತೂರುಮೋಳೆ ಗ್ರಾಮದ ನಿಂಗರಾಜು(21) ಎಂಬಾತನ ವಿರುದ್ಧ ಅಪ್ರಾಪ್ತೆ ಅಪಹರಿಸಿದ ದೂರು ದಾಖಲಾಗಿತ್ತು. ಮಂಗಳವಾರ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ಯವಾಗ ಪರಾರಿಯಾಗಲು ಜೀಪಿನಿಂದ ಲಿಂಗರಾಜು ಹಾರಿ ತೀವ್ರವಾಗಿ ಗಾಯಗೊಂಡಿದ್ದಾನೆ. ಬಳಿಕ, ಆಸ್ಪತ್ರೆಗೆ ರವಾನಿಸಲಾಯಿತಾದರೂ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಮಾನತು ಆದೇಶಕ್ಕೆ ದಲಿತ ಸಂಘಟನೆಗಳು ಆಕ್ರೋಶಗೊಂಡು ಇಂದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ಪೊಲೀಸ್ ಜೀಪಿನಿಂದ ಜಿಗಿದು ಆರೋಪಿ ಸಾವು: ಸಿಪಿಐ, ಪಿಎಸ್ಐ ಸೇರಿ ಮೂವರ ವಿರುದ್ಧ ಕೇಸ್