ಚಾಮರಾಜನಗರ: ಉತ್ತರಪ್ರದೇಶದ ಹಥ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣ ಖಂಡಿಸಿ ನಗರದಲ್ಲಿ ಎಸ್ಡಿಪಿಐ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿತು.
ಹಥ್ರಾಸ್ ಅತ್ಯಾಚಾರ-ಹತ್ಯೆ ಪ್ರಕರಣ ಖಂಡಿಸಿ ಚಾಮರಾಜನಗರದಲ್ಲಿ ಪಂಜಿನ ಮೆರವಣಿಗೆ - ಎಸ್ಡಿಪಿಐ ಕಾರ್ಯಕರ್ತರು ಪಂಜಿನ ಮೆರವಣಿಗೆ
ಹಥ್ರಾಸ್ ಪ್ರಕರಣ ಖಂಡಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದು, ನಿನ್ನೆ ಚಾಮರಾಜನಗರದಲ್ಲಿಯೂ ಸಹ ಎಸ್ಡಿಪಿಐ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಯುಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಥ್ರಾಸ್ ಅತ್ಯಾಚಾರ-ಹತ್ಯೆ ಪ್ರಕರಣ ಖಂಡಿಸಿ ಚಾಮರಾಜನಗರದಲ್ಲಿ ಪಂಜಿನ ಮೆರವಣಿಗೆ
ಲಾರಿ ಸ್ಟ್ಯಾಂಡ್ನಿಂದ ಭುವನೇಶ್ವರಿ ವೃತ್ತದವರೆಗೆ ಎಸ್ಡಿಪಿಐ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ಯುಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಹಿಳೆಯರು ಬದುಕಲಾರದ ಸ್ಥಿತಿ ಯುಪಿಯಲ್ಲಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು. ಕೇರಳದ ಆನೆಗಾಗಿ ಮರುಗಿದವರು, ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಬೀದಿಗಿಳಿದವರು ಇದೀಗ ಮೌನವಾಗಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದವರ ಜಾತಿ ನೋಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.