ಚಾಮರಾಜನಗರ: ನಗರದ ಡಿ.ಜೆ. ಹಳ್ಳಿ ಗಲಭೆ ಪ್ರಕರಣವನ್ನು ಖಂಡಿಸಿ ಅಜಾದ್ ಹಿಂದೂ ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
SDPI ಸಂಘಟನೆ ನಿಷೇಧಕ್ಕೆ ಆಗ್ರಹ: ಚಾಮರಾಜನಗರದಲ್ಲಿ ಪ್ರತಿಭಟನೆ - Protest in Chamarajanagar
ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣವನ್ನು ಖಂಡಿಸಿ, ಚಾಮರಾಜನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.
ಚಾಮರಾಜನಗರದಲ್ಲಿ ಪ್ರತಿಭಟನೆ
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಮಾನವ ಸರಪಳಿ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆದು ಕಿಡಿಗೋಡಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
ಕೂಡಲೇ ಗಲಭೆಕೋರರನ್ನು ಬಂಧಿಸಬೇಕು. ಗಲಭೆಗೆ ಕಾರಣವಾದ ಎಸ್ಡಿಪಿಐ ಸಂಘಟನೆಯನ್ನು ವಜಾಗೊಳಿಸಬೇಕು. ಈ ಸಂಘಟನೆಯಿಂದಲೇ ಗಲಭೆಯಾಗಿದ್ದು, ನಮ್ಮದು ಗೂಂಡಾ ರಾಜ್ಯವಲ್ಲ ಎಂಬುದನ್ನು ಗಲಭೆಕೋರರಿಗೆ ಮನದಟ್ಟು ಮಾಡಿಸಬೇಕೆಂಬ ಆಕ್ರೋಶ ಕೇಳಿಬಂತು.